ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ : ಸಂಸದರ ಆದರ್ಶ ಗ್ರಾಮದಲ್ಲಿ ಈ ಮನೆಗೆ ಕರೆಂಟೇ ಇಲ್ಲ..!

ಸುಳ್ಯ : ಸಂಸದರ ಆದರ್ಶ ಗ್ರಾಮ ಎಂಬ ಖ್ಯಾತಿ ಹೊಂದಿರುವ ಬಳ್ಪ ಗ್ರಾಮದ ಅರ್ಗುಡಿ ಎಂಬಲ್ಲಿ ಕುಶಾಲಪ್ಪ ಗೌಡ ಎಂಬುವವರ ಮನೆಗೆ ವಿದ್ಯುತ್ ಸಂಪರ್ಕ ಇಲ್ಲ ಎಂಬ ವಿಚಾರ ಬಯಲಿಗೆ ಬಂದಿದೆ.

ಬಳ್ಪದ ಅರ್ಗುಡಿ ಮನೆಯ ಕುಶಾಲಪ್ಪ ಗೌಡ ಹಾಗೂ ಪತ್ನಿ ಕಮಲ ಎಂಬುವವರು ತಮ್ಮ ಇಬ್ಬರು ಗಂಡು ಮಕ್ಕಳ ಜೊತೆ ವಾಸವಾಗಿದ್ದಾರೆ. ಇವರ ಮೊದಲನೇ ಮಗ 10ನೇ ತರಗತಿಯಲ್ಲಿ ಓದುತ್ತಿದ್ದರೆ ಎರಡನೇ ಮಗ 8ನೇ ತರಗತಿಯಲ್ಲಿ ಓದುತ್ತಿದ್ದಾನೆ.

ಈ ಮಕ್ಕಳು ರಾತ್ರಿ ವೇಳೆ ಡೀಸೆಲ್ ಬಳಸಿ ಓದಬೇಕಾದ ಪರಿಸ್ಥಿತಿ ಎದುರಾಗಿದೆ. ಇವರಿಗೆ ತಿಂಗಳಿಗೆ ಆರು ಲೀಟರ್ ಡೀಸೆಲ್ ದೀಪ ಉರಿಸಲು ಬೇಕಾಗುತ್ತದೆ. ಇದು ಈ ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಡೀಸೆಲ್ ದೀಪದಿಂದ ಬರುವ ಹೊಗೆಯಿಂದಾಗಿ ಮಕ್ಕಳ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತಿದೆ.

ಕೊರೋನಾ ಸಂದರ್ಭದಲ್ಲಿ ಆನ್ ಲೈನ್ ಕ್ಲಾಸ್ ನಡೆಯುತ್ತಿರುವಾಗ ಅದರ ಯಾವುದೇ ಸೌಲಭ್ಯಗಳು ಈ ವಿದ್ಯಾರ್ಥಿಗಳಿಗೆ ದೊರೆತಿಲ್ಲ. ವಿದ್ಯುತ್ ಸಂಪರ್ಕ‌ ಕಲ್ಪಿಸಿ ಕೊಡಿ ಅಂತಾ ಕುಶಾಲಪ್ಪ ಗೌಡರು ಇಲಾಖೆಯಿಂದ ಇಲಾಖೆಗಳಿಗೆ ಸುತ್ತಿದ್ದು ಅನೇಕ ಬಾರಿ. ಹೀಗೆ ಇವ್ರು ತನ್ನ ಮನೆಯ ವಿದ್ಯುತ್ ಸಮಸ್ಯೆ ಹೇಳಿಕೊಂಡು ಸುಮಾರು 15 ಸಲ ಮನವಿ ಮಾಡಿದ್ದಾರೆ. ಆದರೆ ಫಲ ಮಾತ್ರ ಶೂನ್ಯ. ಈ ಮಧ್ಯೆ ವಿದ್ಯುತ್ ಮೀಟರ್ ಬಂದಿದೆಯೆಂದು ಹೇಳಿ ಯಾರೋ ಒಬ್ಬ ಖತರ್ನಾಕ್ ವ್ಯಕ್ತಿ ಕುಶಾಲಪ್ಪ ಗೌಡರ ಕೈಯಿಂದ ವಿದ್ಯುತ್ ಮೀಟರ್ ಗೋಸ್ಕರ ರೂಪಾಯಿ 1200 ಲಪಟಾಯಿಸಿದ್ದಾನೆ.

Edited By : Manjunath H D
Kshetra Samachara

Kshetra Samachara

16/02/2021 12:46 pm

Cinque Terre

20.17 K

Cinque Terre

3

ಸಂಬಂಧಿತ ಸುದ್ದಿ