ಕಾಪು: ಮದ್ಯ ಸೇವಿಸಿ ರಸ್ತೆ ಉದ್ದಕ್ಕೂಅಡ್ಡಾದಿಡ್ಡಿಯಾಗಿ ಲಾರಿ ಚಲಾಯಿಸುತ್ತಿದ್ದ ಲಾರಿ ಚಾಲಕನೋರ್ವನನ್ನು ವಶಕ್ಕೆ ಪಡೆದ ಕಾಪು ಠಾಣಾ ಪಿಎಸ್ಸೈ ರಾಘವೇಂದ್ರ ಅವರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಹಾರಾಷ್ಟ್ರ ನೋಂದಣಿಯ ಲಾರಿಯನ್ನು ಚಾಲಕ ಅಮಲು ಪದಾರ್ಥ ಸೇವಿಸಿ ಓಡಿಸುತ್ತಿರುವುದನ್ನು ಗಮನಿಸಿದ ಹಿಂಬದಿಯ ಸವಾರರು ಕೂಡಲೇ ಪೊಲೀಸರ ಗಮನಕ್ಕೆ ತಂದಿದ್ದಾರೆ. ತಕ್ಷಣ
ಕಾರ್ಯಪ್ರವೃತ್ತರಾದ ಕಾಪು ಠಾಣೆ ಪಿಎಸ್ಸೈ ರಾಘವೇಂದ್ರ ಕಾಪುವಿನಲ್ಲಿ ಲಾರಿಯನ್ನು ತಡೆದು ನಿಲ್ಲಿಸಿ ಲಾರಿ ಸಹಿತ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಸಮಯ ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಿ ದೊಡ್ಡ ಅನಾಹುತ ತಪ್ಪಿಸಿದ ಕಾಪು ಎಸ್ಸೈ ರಾಘವೇಂದ್ರ ವ್ಯಾಪಕ ಪ್ರಶಂಸೆಗೆ ಪಾತ್ರರಾದರು.
Kshetra Samachara
23/01/2021 10:03 am