ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ :ಎರಡು ದಶಕ ಕಳೆದರೂ ಮೇಲ್ದರ್ಜೆಗೆ ಏರದ ಆಸ್ಪತ್ರೆ: ಯುವಶಕ್ತಿ ಕರ್ನಾಟಕದಿಂದ ಬೃಹತ್ ಅಭಿಯಾನ,ಉಪವಾಸ ಸತ್ಯಾಗ್ರಹ

ಉಡುಪಿ: ಜಿಲ್ಲೆ ರಚನೆಯಾಗಿ ಎರಡು ದಶಕ ಕಳೆದರೂ ಉಡುಪಿ ಜಿಲ್ಲಾ ಕೇಂದ್ರದಲ್ಲಿರುವ ಅಜ್ಜರಕಾಡು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸದ ಬಗ್ಗೆ ಆಕ್ರೋಶ ಹೆಚ್ಚುತ್ತಿದೆ.ಈ ಸಂಬಂಧ ಯುವಶಕ್ತಿ ಕರ್ನಾಟಕ ದೊಡ್ಡ ಅಭಿಯಾನವನ್ನೇ ಕೈಗೊಂಡಿದ್ದು ಹೋರಾಟ ನಡೆಸಲು ಸಜ್ಜಾಗಿದೆ.ಇದರ ಮೊದಲ ಹೆಜ್ಹೆಯಾಗಿ ನಾಳೆ ಗಾಂಧಿ ಜಯಂತಿ ಸಂದರ್ಭ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ.

ಈ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಯುವಶಕ್ತಿ ಸಂಘಟನೆ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ್ ,1962 ರಲ್ಲಿ ನಿರ್ಮಾಣಗೊಂಡ 60 ವರ್ಷ ಹಳೆಯದಾದ ಕಟ್ಟಡದಲ್ಲೇ ಉಡುಪಿ ಜಿಲ್ಲಾಸ್ಪತ್ರೆಕಾರ್ಯಾಚರಿಸುತ್ತಿದೆ.ಉಡುಪಿ ಜಿಲ್ಲೆ ರಚನೆಯಾಗಿ ಎರಡು ದಶಕ ಕಳೆದರೂ ಇನ್ನೂ ಜಿಲ್ಲಾ ಕೇಂದ್ರದ ಆಸ್ಪತ್ರೆ ,ತಾಲೂಕು ಮಟ್ಟದ ಆಸ್ಪತ್ರೆ ಮಟ್ಟದಲ್ಲೇ ಇದೆ.ಎರಡು ದಶಕಗಳಲ್ಲಿ ಉಡುಪಿ ಜಿಲ್ಲೆಗೆ ಹನ್ನೊಂದು ಮಂದಿ ಜಿಲ್ಲಾ ಉಸ್ತುವಾರಿ ಸಚಿವರು,16 ಜಿಲ್ಲಾಧಿಕಾರಿಗಳು,19 ಮಂದಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಬಂದು ಹೋಗಿದ್ದಾರೆ.ಯಾವುದೇ ಸರಕಾರಕ್ಕೆ,ಯಾವುದೇ ಪಕ್ಷದ ಜನಪ್ರತಿನಿಧಿಗಳಿಗೆ ಮೇಲ್ದರ್ಜೆಗೆ ಏರಿಸುವ ಇಚ್ಛಾಶಕ್ತಿ ಇಲ್ಲ.ಹೀಗಾಗಿ ಯುವಶಕ್ತಿ ಕರ್ನಾಟಕ ಬೃಹತ್ ಅಭಿಯಾನ‌ ಕೈಗೊಂಡಿದೆ.ಮಾತನಾಡು ಉಡುಪಿ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು,ನಾಳೆ ಇಡೀ ದಿನ ಉಪವಾಸ ಸತ್ಯಾಗ್ರಹ ನಡೆಸಿ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಯುವಶಕ್ತಿ ಕರ್ನಾಟಕದ ಸ್ಥಾಪಕಾಧ್ಯಕ್ಷ ಮಹಮ್ಮದ್ ಶೀಶ್ ,ಬೆಳ್ಕಳೆ ಶರತ್ ಶೆಟ್ಟಿ,ಹಬೀಬ್ ಉಡುಪಿ,ಶಾಹಿದ್ ,ಸಜನ್ ಶೆಟ್ಟಿ ,ಇಮ್ರಾನ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

01/10/2020 12:36 pm

Cinque Terre

25.38 K

Cinque Terre

3

ಸಂಬಂಧಿತ ಸುದ್ದಿ