ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ಏರ್‌ಪೋರ್ಟ್‌ನಲ್ಲಿ ಕಳೆದುಹೋದ ವಸ್ತುಗಳನ್ನು ಮರಳಿ ದೊರಕಿಸಿಕೊಡಲು ವಿಶೇಷ ವ್ಯವಸ್ಥೆ

ಮಂಗಳೂರು: ನಗರದ ಬಜ್ಪೆಯಲ್ಲಿರುವ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ವಸ್ತುಗಳನ್ನು ಕಳೆದುಕೊಂಡಲ್ಲಿ ಅದನ್ನು ಮರಳಿ ಪಡೆಯಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿ ತಿಂಗಳು ಪ್ರಯಾಣಿಕರು ಕಳೆದುಕೊಂಡಿರುವ ಸರಾಸರಿ 150 ವಸ್ತುಗಳು ದೊರಕುತ್ತದೆ. ಈ ವಸ್ತುಗಳನ್ನು ಮತ್ತೆ ಸಂಬಂಧಪಟ್ಟವರಿಗೆ ನೀಡುವ ವೇಳೆ ಅದರ ನಿಜವಾದ ವಾರಸುದಾರರು ಯಾರು ಎಂಬುದನ್ನು ಖಚಿತ ಪಡಿಸಲು ಟರ್ಮಿನಲ್ ಮ್ಯಾನೆಜರ್ ಕಚೇರಿ ನಿಗಾವಹಿಸುತ್ತದೆ. ವಿಮಾನ ನಿಲ್ದಾಣದಲ್ಲಿ ಕಂಡುಬರುವ ಎಲ್ಲಾ ವಸ್ತುಗಳನ್ನು ಟರ್ಮಿನಲ್ ಮ್ಯಾನೇಜರ್‌ ಕಚೇರಿಯಲ್ಲಿ ಠೇವಣಿ ಮಾಡಲಾಗುತ್ತದೆ ಮತ್ತು ರಿಜಿಸ್ಟರ್‌ನಲ್ಲಿ ನಮೂದಿಸಲಾಗುತ್ತದೆ.

ಈಗಾಗಲೆ ಹಲವು ಪ್ರಯಾಣಿಕರು ಸೊಳ್ಳೆ ಬ್ಯಾಟ್, ಚಪ್ಪಲಿಗಳು, ಕುತ್ತಿಗೆಯ ದಿಂಬುಗಳು, ಸೆಲ್ ಫೋನ್ ಗಳನ್ನು ಮತ್ತು ಅಮೂಲ್ಯವಾದ ಚಿನ್ನ ದ ಆಭರಣಗಳನ್ನು ಬಿಟ್ಟು ಹೋಗಿದ್ದಾರೆ. ಈ ರೀತಿ ಬಿಟ್ಟು ಹೋದ ವಸ್ತುಗಳನ್ನು ಮರಳಿ ಪಡೆಯಲು ಕೆಲವು ಸಂದರ್ಭ ಪ್ರಯಾಣಿಕರು ಬಂದರೆ, ಕೆಲ ವೇಳೆ ಅವರಿಗೆ ಸಂಬಂಧಪಟ್ಟವರು ಬರುತ್ತಾರೆ. ಇವುಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸಹ ಸರಳಗೊಳಿಸಲಾಗಿದೆ. ಇದೀಗ ವಸ್ತುಗಳನ್ನು ಕಳೆದುಕೊಂಡವರು ಕಚೇರಿ ಸಮಯದಲ್ಲಿ ಟರ್ಮಿನಲ್ ಮ್ಯಾನೇಜರ್‌ ಅನ್ನು ಸಂಪರ್ಕಿಸಬಹುದಾಗಿದೆ.

Edited By : Vijay Kumar
Kshetra Samachara

Kshetra Samachara

14/09/2022 10:00 am

Cinque Terre

9.57 K

Cinque Terre

1

ಸಂಬಂಧಿತ ಸುದ್ದಿ