ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಹ್ಮಣ್ಯ: ಅವೈಜ್ಞಾನಿಕ ಭೂ ಅಗೆತಗಳು : ಭೂಮಾಫಿಯಾಗೆ ಸಾಥ್ ನೀಡುತ್ತಿದ್ದಾರಾ ಅಧಿಕಾರಿಗಳು..!?

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಮಣ್ಯ ಸೇರಿದಂತೆ ಹಲವು ಕಡೆಗಳಲ್ಲಿ ಅವೈಜ್ಞಾನಿಕ ಭೂಮಿ ಅಗೆತ ಕಾಮಗಾರಿ ಹಾಗೂ ಬೃಹತ್ ಭೂಮಾಫಿಯಾ ಬಡವರ ಪಾಲಿಗೆ ಮಾರಕವಾಗಿ ಪರಿಣಮಿಸುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

ಸದ್ಯ ಕುಕ್ಕೆಯಲ್ಲಿ ಅಪಾಯದ ಅಂಚಿನಲ್ಲಿ ಏಳು ಮನೆಗಳಿವೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತಿನ ನೂಚಿಲ ಎಂಬಲ್ಲಿ ಖಾಸಗಿ ವ್ಯಕ್ತಿಗಳು ವರ್ಗ ಭೂಮಿಯನ್ನು ಹಾಗೂ ಅದಕ್ಕೆ ಸೇರಿದ ಕುಮ್ಕಿ ಜಾಗವನ್ನು ಸೈಟ್ ರೂಪದಲ್ಲಿ ಮಾರ್ಪಡು ಮಾಡಿ ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಈ ಭೂಮಿಯಲ್ಲಿ ನೂಚಿಲ ದುಗ್ಗಪ್ಪ ಮಲೇಕುಡಿಯ,ಭಾಸ್ಕರ,ದಿನೇಶ್ ,ಪದ್ಮಯ್ಯ ಮಲೇಕುಡಿಯ, ಪ್ರಮೋದ್,ದೇವಕಿ, ಗೀತಾ ಮಲೇಕುಡಿಯ,ಎಂಬವರು ಸರಕಾರದಿಂದ ಹಕ್ಕುಪತ್ರ ಪಡೆದು ಮನೆಯನ್ನು ನಿರ್ಮಾಣ ಮಾಡಿದ್ದಾರೆ.

ಇದೀಗ ಈ ಏಳು ಮನೆಗಳೂ ಅಪಾಯದ ಅಂಚಿನಲ್ಲಿದೆ. ಮೂರು ದಿನಗಳ ಹಿಂದೆ ಈ ಪ್ರದೇಶದಲ್ಲಿ ಭೂಕುಸಿತವಾಗಿದ್ದು ಬಹುತೇಕ ಎಲ್ಲಾ ಮನೆಗಳಿಗೆ ಕೆಸರು,ಮಣ್ಣು, ನೀರು ತುಂಬಿಕೊಂಡಿದೆ,ಪ್ರಸ್ತುತ ಅದರ ತೆರವು ಕಾರ್ಯಗಳು ಈಗ ನಡೆಯುತ್ತಿದೆ.

ಗ್ರಾಮಪಂಚಾಯಿತ್ ಸದಸ್ಯರಾದ ಹರೀಶ್ ಇಂಜಾಡಿ ಹೇಳುವ ಪ್ರಕಾರ ಕುಕ್ಕೆ ಸುಬ್ರಹ್ಮಣ್ಯ ಗ್ರಾಮದಲ್ಲಿ ಕೆಲವು ಉದ್ಯಮಿಗಳು ಅಧಿಕಾರಿಗಳ ಸಹಕಾರದೊಂದಿಗೆ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡು, ಭೂಮಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ನಿವೇಶನ ರಹಿತರಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವ ದಂಧೆ ಅತ್ಯಂತ ವ್ಯವಸ್ಥಿತವಾಗಿ ಈ ಕಡೆಗಳಲ್ಲಿ ನಡೆಯುತ್ತಿದೆ.

ಮಾತ್ರವಲ್ಲದೇ ಅವೈಜ್ಞಾನಿಕ ಭೂಮಿ ಅಗೆತ ಕಾಮಗಾರಿಗಳು ಯಾರ ಭಯಾವೂ ಇಲ್ಲದೇ ನಡೆಯುತ್ತಿದ್ದೂ,ಗುಡ್ಡ ಪ್ರದೇಶವಾಗಿರುವ ಜಾಗಗಳನ್ನು ಅಗೆಯುತ್ತಿದ್ದು ದೊಡ್ಡ ದೊಡ್ಡ ಬರೆಗಳು ನಿರ್ಮಾಣವಾಗುತ್ತಿದೆ.

ಇತೀಚಿಗೆ ಕುಮಾರಧಾರ ಸಮೀಪ ಪರ್ವತಮುಖಿ ಎಂಬಲ್ಲಿ ಮನೆಯ ಮೇಲೆ ಭೂಕುಸಿತವಾಗಿ ಪುಟ್ಟ ಮಕ್ಕಳಿಬ್ಬರು ಸಾವನಪ್ಪಿದ ಘಟನೆ ನಡೆದಿತ್ತು. ಇಲ್ಲಿ ಈ ದುರಂತ ನಡೆಯಲು ಇಲ್ಲೇ ಪಕ್ಕದ ಜಾಗದ ಅವೈಜ್ಞಾನಿಕ ಭೂಮಿ ಅಗೆತ ಕಾಮಗಾರಿ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ತಕ್ಷಣವೇ ಕುಕ್ಕೆ ಸುಬ್ರಮಣ್ಯದ ನೂಚಿಲದಲ್ಲಿರುವ ಅಪಾಯದ ಅಂಚಿನಲ್ಲಿರುವ ಮನೆಗಳಿಗೆ ಪಕ್ಕದ ಗುಡ್ಡ ಬೀಳದಂತೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಹರೀಶ್ ಇಂಜಾಡಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.

Edited By :
Kshetra Samachara

Kshetra Samachara

06/08/2022 07:57 am

Cinque Terre

12.41 K

Cinque Terre

0

ಸಂಬಂಧಿತ ಸುದ್ದಿ