ಮಂಗಳೂರು: ಮಳೆಯ ಅಬ್ಬರ ಕೊಂಚ ತಗ್ಗಿದರೂ, ಕಡಲಬ್ಬರ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಸಮುದ್ರ ವಿಹಾರಿಗಳ ಸ್ವರ್ಗವಾಗಿದ್ದ ಪಣಂಬೂರು ಬೀಚ್ ಕಡಲಬ್ಬರಕ್ಕೆ ಕಣ್ಮರೆಯಾಗಿದೆ.
ಪಣಂಬೂರು ಬೀಚ್ ಮಂಗಳೂರಿನಲ್ಲಿ ಅತ್ಯಂತ ಪ್ರಸಿದ್ಧ ಬೀಚ್. ಇದು ನಗರದಲ್ಲಿನ ಎಲ್ಲಾ ಬೀಚ್ ಗಳಲ್ಲಿಯೂ ಶಾಂತವಾದ ಬೀಚ್. ಆದರೆ ಈ ಬಾರಿ ಅತ್ಯಂತ ಪ್ರಕ್ಷುಬ್ಧಗೊಂಡ ಬೀಚ್ ಸಂಪೂರ್ಣ ಹಾನಿಯಾಗಿದೆ.
ಪಣಂಬೂರು ಬೀಚ್ 500 ಮೀಟರ್ ನಷ್ಟು ಪರಿಸರವನ್ನು ಆಪೋಷಣ ತೆಗೆದುಕೊಂಡಿದೆ. ಪ್ರವಾಸಿಗರು, ವಿಹಾರಿಗಳು ಸಮುದ್ರಕ್ಕೆ ಇಳಿಯದಂತೆ ಮುಂಜಾಗ್ರತಾ ಕ್ರಮವಾಗಿ ಹಗ್ಗವನ್ನು ಕಟ್ಟಿ ತಡೆ ಬೇಲಿ ಹಾಕಲಾಗಿದೆ. ಸಮುದ್ರ ಮತ್ತಷ್ಟು ಪ್ರಕ್ಷುಬ್ಧವಾದಲ್ಲಿ ಪಣಂಬೂರು ಬೀಚ್ ಮತ್ತಷ್ಟು ಹಾನಿಯಾಗುವ ಆತಂಕ ಎದುರಾಗಿದೆ.
PublicNext
16/07/2022 03:47 pm