ಬೈಂದೂರು: ಉಡುಪಿ ಜಿಲ್ಲೆ ಬೈಂದೂರು ವಲಯದಲ್ಲಿ ಜುಲೈ 3ರಂದು (ಭಾನುವಾರ) ಗುಜ್ಜಾಡಿ ಗ್ರಾಮದ ಮಂಕಿ ಎಂಬಲ್ಲಿ ಸ್ದಂದನ ಯುವ ಸಂಘ ಮಂಕಿ ಗುಜ್ಜಾಡಿ ವತಿಯಿಂದ ಹಮ್ಮಿಕೊಳ್ಳಲಾದ "ಕಾಡು ಬೆಳಸಿ ನಾಡು ಉಳಿಸಿ, ಗಿಡ ಬೆಳೆಸಿ ಪರಿಸರ ಉಳಿಸಿ" ಎಂಬ ಧ್ಯೇಯ ಉದ್ದೇಶದಿಂದ ವನಮಹೋತ್ಸವ ಕಾರ್ಯಕ್ರಮ ನೆರವೇರಿತು.
ಕುಂದಾಪುರ ತಾಲೂಕಿನ ಗುಜ್ಜಾಡಿ 1ನೇ ವಾರ್ಡಿನ ಮುಳ್ಳಿಕಟ್ಟೆ ಮಂಕಿ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಒಟ್ಟು 150 ಗಿಡಗಳನ್ನು ನೆಟ್ಟು ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭ ಸ್ಪಂದನ ಸಂಘದ ಅಧ್ಯಕ್ಷರು, ಹಾಗೂ ಗೌರವಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕುಂದಾಪುರ ಉಪ ವಲಯ ಅರಣ್ಯ ಅಧಿಕಾರಿ ದಿಲೀಪ್ ಕುಮಾರ್, ಅರಣ್ಯ ರಕ್ಷಕ ಆನಂದ ಬಳೆಗರ್ ಹಾಗೂ ರಾಮಪ್ಪ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
Kshetra Samachara
03/07/2022 01:13 pm