ಉಡುಪಿ: ಉಡುಪಿಯಲ್ಲಿ ಮುಸಲಧಾರೆಗೆ ಹಲವೆಡೆ ಅನಾಹುತಗಳುಸಂಭವಿಸಿವೆ.ಕೃಷಿಭೂಮಿ ಮತ್ತು ಮನೆಗಳು ಜಲಾವೃತಗೊಂಡಿವೆ. ಭಾರೀ ಮಳೆಗೆ ಸ್ವರ್ಣಾ ನದಿ ನೀರಿನ ಮಟ್ಟ ಹೆಚ್ಚಳವಾಗಿದ್ದು ಉಪ್ಪೂರಿನ ಸರಕಾರಿ ಪ್ರಾಥಮಿಕ ಶಾಲೆ ಭಾಗಶಃ ಮುಳುಗಡೆಯಾಗಿದೆ.
ಶಾಲೆಯ ಆವರಣದ ಒಳಗಡೆ ನದಿ ನೀರು ತುಂಬಿದೆ.ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಶಾಲೆಗೆ ವರ್ಷಂಪ್ರತಿ ನೆರೆ ಹಾವಳಿ ಇದ್ದೇ ಇರುತ್ತೆ.ಆದರೆ ಈ ಬಾರಿ ನೆರೆನೀರಿನಿಂದ ಶಾಲೆ ಜಲಾವೃತಗೊಂಡಿದೆ. ಶಾಲೆಯ ಪಕ್ಕದ ಮನೆಗಳು ಮತ್ತು ಭಜನಾ ಮಂದಿರಕ್ಕೂ ನೆರೆ ನೀರು ನುಗ್ಗಿದೆ.
ಸದ್ಯ ಶಾಲೆಗಳಿಗೆ ರಜೆ ಘೋಷಣೆ ಆಗಿರುವುದರಿಂದ ಯಾವುದೇ ಸಮಸ್ಯೆ ಆಗಿಲ್ಲ.ಪ್ರತಿವರ್ಷ ಈ ಶಾಲೆ ಜಲಾವೃತಗೊಳ್ಳುತ್ತಿದ್ದು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
08/07/2022 01:21 pm