ಮುಲ್ಕಿ: ಬಳ್ಕುಂಜೆ ಗ್ರಾ ಪಂನ ಕವತ್ತಾರು ಶಾಲಾ ಬಳಿಯಿಂದ ಹಾದು ಹೋಗಿ ನಡಿಬೆಟ್ಟು ಸೇರುವ ಕವತ್ತಾರು-ಅತಿಕಾರಿಬೆಟ್ಟು ಗ್ರಾಮದ ಸಂಪರ್ಕ ರಸ್ತೆಯನ್ನು ಇಂದು ಕವತ್ತಾರು, ಪುತ್ತೂರು ಹಾಗೂ ಅತಿಕಾರಿಬೆಟ್ಟು ಗ್ರಾಮಸ್ಥರು ಸೇರಿ ದುರಸ್ತಿ ಮಾಡಿದರು. ಕಳೆದ ಕೆಲ ತಿಂಗಳ ಹಿಂದೆ ಶಾಸಕ ಉಮಾನಾಥ ಕೋಟ್ಯಾನ್ ಮುತುವರ್ಜಿಯಿಂದ ಅತಿಕಾರಿಬೆಟ್ಟು ಗ್ರಾಮದ ಮೈಲೊಟ್ಟು ನಿಂದ ಕವತ್ತಾರು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ಅನೇಕ ತಕರಾರುಗಳ ನಡುವೆಯೂ ನಿರ್ಮಾಣವಾಗಿತ್ತು.
ಕಳೆದ ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗಿದ್ದು ಕುಸಿದು ಹೋಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಯುವಕರ ತಂಡ ಭಾನುವಾರ ಶ್ರಮದಾನದ ಮೂಲಕ ತಾತ್ಕಾಲಿಕವಾಗಿ ದುರಸ್ತಿ ಪಡಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಆದಷ್ಟು ಬೇಗ ರಸ್ತೆಗೆ ಡಾಮರೀಕರಣ ನಡೆಸುವಂತೆ ಒತ್ತಾಯಿಸಿದ್ದಾರೆ.
Kshetra Samachara
04/10/2020 09:56 pm