ಧರ್ಮ ಸ್ಥಳ: ಮಂಗಳೂರು ಮಹಾನಗರ ಪಾಲಿಕೆಯ ರಸ್ತೆಯೊಂದಕ್ಕೆ ವಿಜಯಾ ಬ್ಯಾಂಕ್ ಸ್ಥಾಪಕಾಧ್ಯಕ್ಷರಾದ ಮೂಲ್ಕಿ ಎಂ.ಸುಂದರರಾಮ ಶೆಟ್ಟಿಯವರ ಹೆಸರನ್ನು ಇಟ್ಟಿರುವುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದನೆ ಸಲ್ಲಿಸಿದ್ದಾರೆ.
ಬ್ಯಾಂಕಿಂಗ್ ರಂಗದಲ್ಲಿ ಎಂ.ಸುಂದರರಾಮ ಶೆಟ್ಟಿಯವರು, ಮಾಡಿದ ಹಲವು ಸಾಧನೆಗಳನ್ನು ಈ ಸಂದರ್ಭ ಸ್ಮರಿಸಿದ ಡಾ.ಹೆಗ್ಗಡೆಯವರು, ಕೆಲವು ಕಾಲ ಅವರ ಜತೆಗೆ ತಾವೂ ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ದಿನಗಳನ್ನು ನೆನಪಿಸಿಕೊಂಡರು.
ಮಂಗಳೂರು ನಗರದ ಹೃದಯ ಭಾಗ ಹಂಪನಕಟ್ಟೆಯಿಂದ ಜ್ಯೋತಿ ಸರ್ಕಲ್ ನ ಕಡೆಗೆ ಸಾಗುವ ಲೈಟ್ ಹೌಸ್ ಹಿಲ್ ರೋಡ್ ಎಂದೇ ಹೆಸರಾಗಿದ್ದ ರಸ್ತೆಗೆ ಮಹಾನಗರ ಪಾಲಿಕೆ ಇಂದು " ಮೂಲ್ಕಿ ಎಂ. ಸುಂದರರಾಮ ಶೆಟ್ಟಿ ರಸ್ತೆ " ಎಂದು ನಾಮಕರಣ ಮಾಡಿ ಗೌರವ ಸಮರ್ಪಿಸಿದೆ.
Kshetra Samachara
23/09/2020 11:02 pm