ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆದ್ದಾರಿ ದುರವಸ್ಥೆ: ಮುಖ್ಯಮಂತ್ರಿ ಸಹಿತ ಜನಪ್ರತಿನಿಧಿಗಳ ಮುಖವಾಡ ಧರಿಸಿ ಎಸ್.ಡಿ.ಪಿ.ಐ ಅಣಕು ಪ್ರದರ್ಶನ

ಬಂಟ್ವಾಳ: ಮೇಲ್ಕಾರ್ ಮತ್ತು ಕಲ್ಲಡ್ಕ ಜಂಕ್ಷನ್ ಗಳಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ವತಿಯಿಂದ ಪ್ರತ್ಯೇಕವಾಗಿ ಪ್ರತಿಭಟನೆ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ದುರವಸ್ಥೆ, ಅವ್ಯವಸ್ಥೆ ಖಂಡಿಸಿ ನಡೆಯಿತು.

ಈ ವೇಳೆ ಜನಪ್ರತಿನಿಧಿಗಳ ಮುಖವಾಡ ಧರಿಸಿ ಅಣಕು ಪ್ರದರ್ಶನವೂ ನಡೆಯಿತು. ಕಲ್ಲಡ್ಕದಲ್ಲಿ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಮುಂದಿನ ಹತ್ತು ದಿನಗಳೊಳಗಾಗಿ ಹೆದ್ದಾರಿ ಗುಂಡಿಗಳನ್ನು ಮುಚ್ಚದೇ ಇದ್ದಲ್ಲಿ ಮುಂದೆ ಹೆದ್ದಾರಿ ತಡೆಯುವ ಮೂಲಕ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ರಿಯಾಝ್ ಕಡಂಬು, ಕಲಂದರ್ ಪರ್ತಿಪ್ಪಾಡಿ, ಝಕಾರಿಯಾ ಗೋಳ್ತಮಜಲು, ಫೈಝಲ್ ಮಂಚಿ, ಸತ್ತಾರ್ ಕಲ್ಲಡ್ಕ, ಸಿದ್ದೀಖ್ ಪನಾಮಾ, ಯೂಸುಫ್ ಹೈದರ್, ಜವಾಝ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

ಶಾಕೀರ್ ಅಳಿಕೆಮಜಲು ಸ್ವಾಗತಿಸಿ, ವಂದಿಸಿದರು. ಮೇಲ್ಕಾರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್ ಡಿಪಿಐ ರಾಜ್ಯ ಅಧ್ಯಕ್ಷ ಇಲಿಯಾಸ್ ಮೊಹಮ್ಮದ್ ತುಂಬೆ ಮಾತನಾಡಿ, ಸರಕಾರ ಜನರ ಸಮಸ್ಯೆ ಆಲಿಸುವ ಪ್ರಯತ್ನ ಮಾಡದೆ ಜನರ ಹಕ್ಕನ್ನು ಹತ್ತಿಕುವ ಪ್ರಯತ್ನಕ್ಕೆ ಕೈ ಹಾಕಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ ಎಸ್ ಎಚ್, ಕ್ಷೇತ್ರ ಅಧ್ಯಕ್ಷ ಯೂಸುಫ್ ಆಲಡ್ಕ, ಪ್ರಮುಖರಾದ ಸಲೀಂ ಕುಂಪನಮಜಲ್, ಮುನೀಶ್ ಅಲಿ, ಇದ್ರೀಸ್ ಪಿಜೆ, ಸಲೀಂ ಅಲಾಡಿ ಉಪಸ್ಥಿತರಿದ್ದರು. ಮಲಿಕ್ ಕೊಳಕೆ ನಿರೂಪಿಸಿದರು.

Edited By :
Kshetra Samachara

Kshetra Samachara

29/09/2020 03:44 pm

Cinque Terre

14.88 K

Cinque Terre

0

ಸಂಬಂಧಿತ ಸುದ್ದಿ