ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹೊಂಡ ಗುಂಡಿಯ ರಸ್ತೆ: ಅಂಬುಲೆನ್ಸ್ ನಲ್ಲೇ ಆಯ್ತು ಹೆರಿಗೆ! ಇದು ವಾಸ್ತವ ಅಲ್ಲ,ಅಣಕು !

ಉಡುಪಿ: ಇವತ್ತು ಮೃತ್ಯು ಕೂಪದಂತಿರುವ ಹೊಂಡ ಗುಂಡಿಗಳಿರುವ ರಸ್ತೆಯಲ್ಲಿ ಹೋಗುತ್ತಿದ್ದ ಆಂಬುಲೆನ್ಸ್ ನಲ್ಲೇ ಹೆರಿಗೆಯಾದ ಘಟನೆ ನಡೆದಿದೆ. ಸೈರನ್ ಮೊಳಗಿಸುತ್ತ, ನೀಲಿ ಲೈಟ್ ಬೆಳಗಿಸಿ,ವೇಗವಾಗಿ ಆಂಬುಲೆನ್ಸ್ ಬರುತ್ತಿರಬೇಕಾದರೆ ಜನರು ಏನಾಯಿತು ಎಂದು ಗಾಬರಿಗೊಳಗಾಗಿ ರಸ್ತೆ ಉದ್ದಕ್ಕೂ ನಿಂತು ನೋಡುತ್ತಿದ್ದರು. ಅವರೆಲ್ಲರೂ ನೋಡುತ್ತಿದ್ದಂತೆಯೇ ಅಂಬುಲೆನ್ಸ್ ನಡು ರಸ್ತೆಯಲ್ಲಿ ನಿಂತಿತು! ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ಮಹಿಳೆಯನ್ನು ಅಂಬುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ವೇಳೆ ಸಂಪೂರ್ಣ ಹದಗೆಟ್ಟ ರಸ್ತೆಯಿಂದಾಗಿ,ಗರ್ಭಿಣಿ ಮಹಿಳೆ ಅಂಬುಲೆನ್ಸ್ ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಳು.! ಈ ಘಟನೆಯು ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಬರುವ, ಗುಂಡಿಬೈಲಿನಿಂದ ಅಡ್ಕದಕಟ್ಟೆ ಸಂಪರ್ಕಿಸುವ ರಸ್ತೆಯಲ್ಲಿ ನಡೆದಿದೆ.

ಆದರೆ ಇದು ಸತ್ಯ ಘಟನೆ ಅಲ್ಲ! ಕೆಲವು ವರ್ಷಗಳಿಂದ ಹದಗೆಟ್ಟಿರುವ ರಸ್ತೆಯ ಪರಿಸ್ಥಿತಿ ಕುರಿತು ಆಡಳಿತ ವ್ಯವಸ್ಥೆಗಳ ಗಮನ ಸೆಳೆಯಲು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ತಾಯಿ ಮಗುವಿನ ಗೊಂಬೆಗಳನ್ನು ಬಳಸಿಕೊಂಡು ಮಾಡಿರುವ ಅಣುಕು ಪ್ರದರ್ಶನವಾಗಿತ್ತು! ಇಲ್ಲಿಯ ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲಾಗದ ಅಯೋಮಯ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಗೆ ರೋಗಿಗಳು ಸಾಗಿಸುವುದು ಸವಾಲಿನ ಕೆಲಸವಾಗಿದೆ. ಶಾಲಾ ವಿದ್ಯಾರ್ಥಿಗಳು ನಡೆದಾಡಲು ಅಸಾಧ್ಯವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ರಸ್ತೆ ಕಾಂಕ್ರೀಟಿಕರಣ ಮಾಡುವಂತೆ ಸಮಾಜಸೇವಕರು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

02/12/2021 07:48 pm

Cinque Terre

23.54 K

Cinque Terre

0

ಸಂಬಂಧಿತ ಸುದ್ದಿ