ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಲಿಮಾರು: ರಸ್ತೆ ಪಕ್ಕದಲ್ಲೇ ತ್ಯಾಜ್ಯ ರಾಶಿ; ಎಚ್ಚರಿಕೆ ಬ್ಯಾನರ್ ಗೂ ಡೋಂಟ್ ಕೇರ್!

ಪಲಿಮಾರು: ದೇಶಾದ್ಯಂತ ಸ್ವಚ್ಛತೆ ಕಾಪಾಡಲು ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದರೆ, ಕೆಲವೆಡೆ ರಸ್ತೆ ಬದಿ ಸಹಿತ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಪ್ರವೃತ್ತಿ ಇನ್ನೂ ಮುಂದುವರಿದಿದ್ದು, ಕಾನೂನಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ.

ಪಲಿಮಾರು-ಅಡ್ವೆ ಮಾರ್ಗದ ಪಲಿಮಾರು ಚರ್ಚ್ ಸಮೀಪದ ರಸ್ತೆ ಪಕ್ಕದಲ್ಲಿ ನಿರಂತರ ತ್ಯಾಜ್ಯ ಎಸೆತದಿಂದಾಗಿ ಕಸದ ಕೊಂಪೆಯೇ ಸೃಷ್ಟಿಯಾಗಿದೆ.

ಎಚ್ಚರಿಕೆ ಬ್ಯಾನರ್ : "ಇಲ್ಲಿ ಕಸ ಹಾಕಬಾರದು. ಹಾಕಿದವರ ಮೇಲೆ 5000 ರೂ. ದಂಡ ಹಾಗು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂಬ ಬರಹದ ಬ್ಯಾನರೊಂದನ್ನು ಕಸದ ರಾಶಿಯ ಭಾಗದಲ್ಲಿ ಅಳವಡಿಸಿ ಎಚ್ಚರಿಕೆ ನೀಡಲಾಗಿದೆ. ಆದರೆ, ಇದನ್ನು ಕ್ಯಾರೇ ಮಾಡದೆ ಮತ್ತೆ ಅದೇ ಚಾಳಿಯನ್ನು ಈ ತಿಳಿಗೇಡಿಗಳು ಮುಂದುವರಿಸಿದ್ದಾರೆ.

ಅಜ್ಞಾನಿಗಳಿಗೆ ತ್ಯಾಜ್ಯ ಸುರಿಯಲು ರಸ್ತೆಯ ಇಕ್ಕೆಲಗಳೇ ಮೆಚ್ಚಿನ ತಾಣಗಳಾಗುತ್ತಿದ್ದು, ಗೋಣಿಚೀಲಗಳಲ್ಲಿ ತುಂಬಿಸಿ ಇಲ್ಲವೇ ರಸ್ತೆ ಬದಿಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಎಸೆದು ಪರಾರಿಯಾಗುವ ಕಿಡಿಗೇಡಿಗಳಿಗೇನೂ ಇಲ್ಲಿ ಕೊರತೆಯಿಲ್ಲ.

ರಾತ್ರೋರಾತ್ರಿ ಸದ್ದಿಲ್ಲದೆ ಕಸ ಗುಡ್ಡೆ ಹಾಕಿ ಹೋಗುವ ಕುಕೃತ್ಯ ಮುಂದುವರಿಯುತ್ತಲೇ ಇವೆ. ಕೆಲವು ವಾಹನ ಚಾಲಕರು ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ವಸ್ತುಗಳನ್ನು ತಂದು ವಾಹನ ಚಾಲನೆ ಸ್ಥಿತಿಯಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ.

ಈ " ಕೊಳಕ" ರಿಗೆ ಕೂಡಲೇ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

13/12/2020 07:35 pm

Cinque Terre

22.59 K

Cinque Terre

0

ಸಂಬಂಧಿತ ಸುದ್ದಿ