ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾರ್ಮಿಕರ ಖಾಯಂ ನೇಮಕಾತಿಗೆ ಒತ್ತಾಯಿಸಿ ದಸಂಸ ಧರಣಿಗೆ ನಿರ್ಧಾರ!

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಒಳಚರಂಡಿ ವಿಭಾಗದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನ ಖಾಯಂ ಸಿಬ್ಬಂದಿಗಳಾಗಿ ನೇಮಿಸುವಂತೆ ಒತ್ತಾಯಿಸಿ ಪಾಲಿಕೆ ಕಚೇರಿ ಮುಂದೆ ಡಿಸೆಂಬರ್ 14 ರ ಸೋಮವಾರದಂದು ದಿನವಿಡೀ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದ.ಕ. ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹೊರಗುತ್ತಿಗೆ ಸಂಸ್ಥೆಯಿಂದ ಒಳಚರಂಡಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಗುತ್ತಿಗೆ ಸಂಸ್ಥೆ ಮತ್ತು ಮಹಾನಗರ ಪಾಲಿಕೆ ವಿಫಲವಾಗಿದೆ. ವಿಶೇಷ ನೇಮಕಾತಿ ಅಡಿ ಪೌರಾಡಳಿತ ನಿರ್ದೇಶನಯಕ್ಕೆ ಸಲ್ಲಿಸಿದ ಕಾರ್ಮಿಕರ ಪಟ್ಟಿಯಲ್ಲೂ 214 ಮಂದಿಯಲ್ಲಿ 106 ಮಂದಿಯನ್ನ ಮಾತ್ರ ಹೆಸರಿದ್ದು, ಇನ್ನುಳಿದವರಿಗೆ ಅನ್ಯಾಯವೆಸಗಲಾಗಿದೆ.

ಆದ್ದರಿಂದ ತಕ್ಷಣವೇ ಪಟ್ಟಿಯನ್ನ ಮರುಪ್ರಸ್ತಾವನೆ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಕೆ.ಚಂದ್ರ ಕಡಂದಲೆ, ಪದ್ಮನಾಭ ವಾಮಂಜೂರು, ರವೀಂದ್ರ ಕಟೀಲ್, ಹನೀಫ್ ಮತ್ತಿತ್ತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

10/12/2020 04:43 pm

Cinque Terre

15.79 K

Cinque Terre

0

ಸಂಬಂಧಿತ ಸುದ್ದಿ