ಮಂಗಳೂರು: ಮಂಗಳೂರಿಗೆ ರೈಲಿನಲ್ಲಿ ಆಗಮಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಅವರು ಈ ಮಣ್ಣಿಗೆ ಪಾದಾರ್ಪಣೆ ಮಾಡಿ ಸಾಮಾಜಿಕ ಪರಿವರ್ತನೆಯ ನಾಂದಿ ಹಾಡಿದ ನೆನಪಿಗಾಗಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಅವರ ಹೆಸರಿಡಲು ಮೇಯರ್ ದಿವಾಕರ್ ಪಾಂಡೇಶ್ವರ ಅವರಿಗೆ ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಅಬ್ದುಲ್ ರವೂಫ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಪಾಲಿಕೆ ಪರಿಷತ್ತಿನ ಮುಂದಿನ ಸಾಮಾನ್ಯ ಸಭೆಯಲ್ಲಿ ಗೊತ್ತುವಳಿ ಮಂಡಿಸಿ ನಿರ್ಣಯ ಕೈಗೊಂಡು ಸರಕಾರಕ್ಕೆ
ಸಲ್ಲಿಸಬೇಕೆಂದು ನಿಯೋಗ ಈ ಸಂದರ್ಭ ಒತ್ತಾಯಿಸಿತು.
ಈ ವೇಳೆ ಕಾರ್ಪೊರೇಟರ್ ಗಳಾದ ಎಂ. ಶಶಿಧರ ಹೆಗ್ಡೆ, ಲ್ಯಾನ್ಸಿ ಲೋಟ್ ಪಿಂಟೋ, ಎ. ಸಿ. ವಿನಯ ರಾಜ್ , ಅನಿಲ್ ಕುಮಾರ್, ಕೇಶವ ಮರೋಳಿ, ಸಂಶುದ್ಧೀನ್ ಕುದ್ರೋಳಿ, ಭಾಸ್ಕರ್ ಕೆ., ಲತೀಫ್ ಕಂದಕ್, ನವೀನ್ ಡಿಸೋಜ, ಝೀನತ್ ಸಂಶುದ್ಧೀನ್ ಬಂದರ್ , ಪ್ರವೀಣ್ ಚಂದ್ರ ಆಳ್ವ, ಅಶ್ರಫ್ ಬಜಾಲ್, ಜೆಸಿಂತಾ ಆಲ್ಫ್ರೆಡ್ ಉಪಸ್ಥಿತರಿದ್ದರು.
Kshetra Samachara
21/11/2020 04:54 pm