ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕಂದಾಯ ಇಲಾಖೆಗೆ ಎಸಿಬಿ ದಾಳಿ; ಲಂಚ ಸ್ವೀಕರಿಸುತ್ತಿದ್ದ ನಿರೀಕ್ಷಕ ವಶಕ್ಕೆ

ಕುಂದಾಪುರ: ಇಂದು ಕುಂದಾಪುರ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರ ಕಚೇರಿಗೆ ದಾಳಿ ನಡೆಸಿದ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ವ್ಯಕ್ತಿಯೊಬ್ಬರಿಂದ 5,000 ರೂ. ಲಂಚ ಸ್ವೀಕರಿಸುತ್ತಿದ್ದ ಪ್ರಭಾರ ಕಂದಾಯ ನಿರೀಕ್ಷಕ ಭರತ್ ಶೆಟ್ಟಿ ಎಂಬವರನ್ನು ನಗದು ಸಹಿತ ವಶಕ್ಕೆ ಪಡೆದಿದ್ದಾರೆ.

ಭೂ ಪರಿವರ್ತನೆಗಾಗಿ ವ್ಯಕ್ತಿಯೊಬ್ಬರಿಂದ 12,000 ರೂ. ಬೇಡಿಕೆ ಇಟ್ಟಿದ್ದ ಅವರಿಗೆ ಈ ಬಾಬ್ತಿನ 5,000 ರೂ. ನೀಡುವ ವೇಳೆ ಎಸಿಬಿ ತಂಡ ದಾಳಿ ನಡೆಸಿದೆ.

ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿರೀಕ್ಷಕರಾದ ಸತೀಶ ಕುಮಾರ್, ಚಂದ್ರಕಲಾ, ಸಿಬ್ಬಂದಿ ಪ್ರಸನ್ನ, ರವೀಂದ್ರ, ಅಬ್ದುಲ್ ಜಲಾಲ್, ರಾಘವೇಂದ್ರ ಹೊಸ್ಕೋಟೆ, ಸೂರಜ್, ಅಬ್ದುಲ್ ಲತೀಫ್ ಹಾಗೂ ಪ್ರತಿಮಾ ಇದ್ದರು.

Edited By : Manjunath H D
Kshetra Samachara

Kshetra Samachara

12/11/2020 08:10 pm

Cinque Terre

30.43 K

Cinque Terre

5

ಸಂಬಂಧಿತ ಸುದ್ದಿ