ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಕ್ರಮ ಮೀನುಗಾರಿಕೆ ವಿರುದ್ಧ ಕೊಡೇರಿ ಮೀನುಗಾರರಿಂದ ಆಕ್ರೋಶ

ಕೊಡೇರಿ: ಕೊಡೇರಿ ಕಿರು ಬಂದರಿನ ಮೀನುಗಾರಿಕೆ ಜೆಟ್ಟಿಯಲ್ಲಿ ಯಾವುದೇ ರೀತಿಯ ಮೂಲಸೌಕರ್ಯ ಕಲ್ಪಿಸದೆ ಮೀನು ಮಾರಾಟಕ್ಕೆ ಕಾನೂನು ಬಾಹಿರವಾಗಿ ಮೀನು ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಕೊಡೇರಿಯ ಮೀನುಗಾರರು ಜೆಟ್ಟಿಯಲ್ಲಿ ಒಂದು ದಿನದ ಶಾಂತಿಯುತ ಪ್ರತಿಭಟನೆ ನಡೆಸಿದರು.

ಮೀನುಗಾರಿಕೆಗೆ ತೆರಳಿದ ನಾಡದೋಣಿ ಅಥವಾ ಇನ್ಯಾವುದೇ ರೀತಿಯ ಮೀನುಗಾರಿಕೆ ಬೋಟ್ ಗಳು ಮೀನು ತೆಗೆದುಕೊಂಡು ಬಂದರೆ ಕೊಡೇರಿ ಶಾಲೆ ಸಮೀಪದಲ್ಲಿ ಮೀನು ಖಾಲಿ ಮಾಡುವ ಪ್ರತ್ಯೇಕ ವ್ಯವಸ್ಥೆಇದೆ. ಇದನ್ನು ಬಳಸಿಕೊಳ್ಳದೆ ಮೂಲಸೌಕರ್ಯವೇ ಇಲ್ಲದ ಅವೈಜ್ಞಾನಿಕವಾಗಿ ನಿರ್ಮಿಸಿರುವ ಜೆಟ್ಟಿಯಲ್ಲಿ ಅಕ್ರಮವಾಗಿ ಮೀನು ಖಾಲಿ ಮಾಡುತ್ತಿದ್ದಾರೆ. ಇದರಿಂದ ಕೊಡೇರಿಯ ಜನ ಸಾಮಾನ್ಯರಿಗೆ ಸಮಸ್ಯೆಯಾಗುತ್ತದೆ. ಅಕ್ರಮವಾಗಿ ಮೀನು ಖಾಲಿ ಮಾಡಲು ಅವಕಾಶ ನೀಡಬಾರದು ಎಂದು ಕೊಡೇರಿ ಮೀನುಗಾರರು ಆಗ್ರಹಿಸಿ,

ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರತಿಭಟನೆ ನಡೆಸಿದರು. ಬೈಂದೂರು ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದರು.

Edited By : Nagesh Gaonkar
Kshetra Samachara

Kshetra Samachara

06/11/2020 03:33 pm

Cinque Terre

6.79 K

Cinque Terre

0

ಸಂಬಂಧಿತ ಸುದ್ದಿ