ಹ್ಮಾವರ: ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ಪಡುಮುಂಡು ಎಂಬಲ್ಲಿ ಚಿರತೆ ಕಾಟ ಜೋರಾಗಿದ್ದು ಗ್ರಾಮಸ್ಥರು ಆತಂಕದ ದಿನಗಳನ್ನು ಎದುರಿಸುವಂತಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಚಿರತೆಗಳು ಸುಳಿಯುತ್ತಿವೆ.ರಾತ್ರಿ ಹೊತ್ತು ಮನೆಗಳ ಪರಿಸರಕ್ಕೆ ನುಗ್ಗುವ ಚಿರತೆಗಳು ನಾಯಿಗಳನ್ನು ಬೇಟೆಯಾಡುತ್ತಿವೆ.
ಇದರಿಂದಾಗಿ ಈ ಗ್ರಾಮದ ಜನ ರಾತ್ರಿ ಹಗಲು ಪ್ರಾಣಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಅರಣ್ಯ ಇಲಾಖೆಗೆ ಚಿರತೆ ಹಾವಳಿ ಬಗ್ಗೆ ದೂರು ನೀಡಿದರೂ ಯಾರು ಕೂಡ ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಊರಿನಲ್ಲಿ ರಾತ್ರಿ ವೇಳೆ ಪ್ರತ್ಯಕ್ಷವಾಗುವ ಚಿರತೆಯನ್ನು ಸೆರೆ ಹಿಡಿಯಲು ಸ್ಥಳೀಯ ಯುವಕರೇ ಬೋನು ನಿರ್ಮಾಣ ಮಾಡಿದ್ದಾರೆ. ಆದ್ರೆ ಚಿರತೆ ಇನ್ನೂ ಸೆರೆಯಾಗಿಲ್ಲ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ಬೋನು ರಚಿಸುವ ಮೂಲಕ ಜನರನ್ನು ಭಯಮುಕ್ತರನ್ನಾಗಿ ಮಾಡಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
Kshetra Samachara
26/07/2022 11:56 am