ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ತಾಯಿ ಬುದ್ಧಿ ಹೇಳಿದ್ದಕ್ಜೆ ಒಂಬತ್ತನೇ ತರಗತಿಯ ಮಗ ಆತ್ಮಹತ್ಯೆ ಮಾಡಿಕೊಂಡ!

ಕೋಟ : ಮನೆಯವರು ಬುದ್ಧಿ ಮಾತು ಹೇಳಿದ್ದಕ್ಕೆ ಮನನೊಂದು ಒಂಬತ್ತನೇ . ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸಾಲಿಗ್ರಾಮ ಸಮೀಪದ ಕಾರ್ಕಡದಲ್ಲಿ ಜು. 11ರಂದು ಸಂಭವಿಸಿದೆ.

ಕಾರ್ಕಡದ ಲಕ್ಷ್ಮೀ ಪೂಜಾರಿ ಅವರ ಪುತ್ರ ನಾಗೇಂದ್ರ (14) ಆತ್ಮಹತ್ಯೆಗೆ ಶರಣಾದ ಬಾಲಕ, ಈತ ಕೋಟದ ಖಾಸಗಿ ಹೈಸ್ಕೂಲ್‌ ವೊಂದರ ವಿದ್ಯಾರ್ಥಿಯಾಗಿದ್ದಾನೆ. ಶಾಲೆಗೆ ರಜೆ ಇದ್ದ ಕಾರಣ ಬೆಳಗ್ಗೆ ಕಾರ್ಕಡ ಶಾಲಾ ಮೈದಾನಲ್ಲಿ ಆಟವಾಡಲು, ತೆರಳಿದ್ದ. ಅಪರಾಹ್ನ ಮನೆಗೆ ಬಂದು ಊಟ ಬಡಿಸಲು ಹೇಳಿದಾಗ ಮಳೆಯಲ್ಲಿ ಆಟವಾಡದಂತೆ ತಾಯಿ ಹೇಳಿದ್ದರು.

ಅದೇ ಸಂದರ್ಭ ಕ್ಯಾಂಟೀನ್‌ನಲ್ಲಿ ಗಿರಾಕಿಗಳಿದ್ದು, ಮನೆಗೆ ಹೋಗಿ ಊಟ ಮಾಡುವಂತೆ ಮಗನಿಗೆ ತಿಳಿಸಿದ್ದರು. ಇಷ್ಟಕ್ಕೇ ಹಠ ಸ್ವಭಾವದ ನಾಗೇಂದ್ರ ಸಿಟ್ಟುಗೊಂಡು ಮನೆ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

12/07/2022 11:09 am

Cinque Terre

6.01 K

Cinque Terre

1

ಸಂಬಂಧಿತ ಸುದ್ದಿ