ಉಡುಪಿ: ಕಳೆದ 6 ತಿಂಗಳಿಂದ ಈ ಮಹಿಳೆಯ ಬದುಕು ನಾಗರಿಕ ಸಮಾಜದಲ್ಲಿ ದುರಂತಮಯವಾಗಿತ್ತು. ಬೀದಿಬದಿ ವಾಹನದ ಕೆಳಗೆ ಆಶ್ರಯ ಪಡೆದುಕೊಂಡು ತನ್ನಷ್ಟಕ್ಕೆ ತಾನು ಕಣ್ಣೀರಿಡುತ್ತಾ ಜೀವನ ಸಾಗಿಸುವ ದೃಶ್ಯ ಕರುಣಾಜನಕವಾಗಿತ್ತು.
ಇನ್ನು ಈ ಮಹಿಳೆಯ ಜಿಲ್ಲಾಸ್ಪತ್ರೆ ಹಾಗೂ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ಸಿಕ್ಕಿತ್ತಾದರೂ ಸೂಕ್ತ ಪುನರ್ವಸತಿ ಇಲ್ಲದೆ ಮಹಿಳೆಯ ಬಾಳು ಬೀದಿಪಾಲಾಗಿತ್ತು.ಇದೀಗ ಈಕೆಗೆ ಪುನರ್ವಸತಿ ಕಲ್ಪಿಸುವ ಮೂಲಕ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿಯವರು ಮಾನವೀಯತೆ ಮೆರೆದಿದ್ದಾರೆ.
ಕುಷ್ಠ ರೋಗಿಯಾಗಿರುವ ನಾಗವೇಣಿ(55) ಧರ್ಮಸ್ಥಳದ ಸುಬ್ರಮಣ್ಯ ಕಡೆಯವರು. ಕುಷ್ಠ ರೋಗವಿರುವ ಕಾರಣ ಪುನರ್ವಸತಿಗೆ ಯಾರೂ ಮುಂದೆ ಬಂದಿರಲಿಲ್ಲ. ಸದ್ಯ ವಿಷಯ ತಿಳಿದ ವಿಶು ಶೆಟ್ಟಿ ಮಹಿಳೆಯನ್ನು ಭೇಟಿಯಾಗಿ ಕೇರಳದ ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಿ ಮಾನವೀಯತೆ ಮೆರೆದಿರುವುದು ಸದ್ಯ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
Kshetra Samachara
16/11/2021 07:01 pm