ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅನಾಥ ಬ್ರಾಹ್ಮಣ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿದ ಸಮಾಜ ಸೇವಕ ವಿಶು ಶೆಟ್ಟಿ

ಬ್ರಹ್ಮಾವರ: ಬ್ರಹ್ಮಾವರದ ಆಶ್ರಮವೊಂದರಲ್ಲಿ ಕಳೆದ 2 ವರ್ಷಗಳಿಂದ ನೆಲೆ ಕಂಡು, ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬ್ರಾಹ್ಮಣ ಮಹಿಳೆಯ ಅಂತ್ಯಕ್ರಿಯೆಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮೃತ ಮಹಿಳೆ ಶಾರದಾ ಭಟ್(60) ಉಡುಪಿಯ ಧಾರ್ಮಿಕ ಕೇಂದ್ರವೊಂದರಲ್ಲಿ ಸಹಾಯಕರಾಗಿದ್ದು, ಕೆಲಸ ಕಳೆದುಕೊಂಡ ನಂತರ ಬೀದಿ ಪಾಲಾದಾಗ ಆಶ್ರಮದವರು ಮಹಿಳೆಗೆ ನೆಲೆ ಕಲ್ಪಿಸಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೀಡಾದ ಮಹಿಳೆಯನ್ನು ಆಶ್ರಮದ ಸಂಚಾಲಕ ಪ್ರಶಾಂತ್ ಪೂಜಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.

ಬ್ರಾಹ್ಮಣ ಮಹಿಳೆ ಎಂಬ ಮಾಹಿತಿ ಇರುವುದರಿಂದ ಅಂತ್ಯಕ್ರಿಯೆಯ ವಿಧಿಗಾಗಿ ವಿಶು ಶೆಟ್ಟಿಯವರು ಉಡುಪಿ ಜಿಲ್ಲಾ ವಿಕಲಚೇತನ ಸಂಘದ ಉಪಾಧ್ಯಕ್ಷ ಜಗದೀಶ್ ಭಟ್ ಗೆ ವಿನಂತಿಸಿದ್ದರು. ಸ್ಪಂದಿಸಿದ ಜಗದೀಶ್ ಭಟ್, ವಿಧಿವಿಧಾನ ನೆರವೇರಿಸಿದರು. ಬ್ರಹ್ಮಾವರ ಠಾಣೆ ಪೊಲೀಸರು ಕಾನೂನು ಪ್ರಕ್ರಿಯೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದರು.

Edited By : Nirmala Aralikatti
Kshetra Samachara

Kshetra Samachara

06/11/2021 04:12 pm

Cinque Terre

4.67 K

Cinque Terre

1

ಸಂಬಂಧಿತ ಸುದ್ದಿ