ಬಂಟ್ವಾಳ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯೊಬ್ಬರನ್ನು ಯಾವುದೇ ಝೀರೋ ಟ್ರಾಫಿಕ್ ಇಲ್ಲದೆ ಕೇವಲ ಇಂಡಿಕೇಟರ್ ಹಾಕುವ ಮೂಲಕ ಕೇವಲ 8.5 ನಿಮಿಷದಲ್ಲಿ ಸುಮಾರು 19 ಕಿ.ಮೀ. ದೂರವನ್ನು ಕ್ರಮಿಸಿ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಮಾಣಿಯ ಯುವಕ ಮಂಡಲ ಸದಸ್ಯರೂ ಆಗಿರುವ ಯುವ ಕಾಂಗ್ರೆಸ್ ವಲಯಾಧ್ಯಕ್ಷ ವಿಕೇಶ್ ಶೆಟ್ಟಿ ಅವರ ಕಾರ್ಯ ಈಗ ಪ್ರಶಂಸೆಗೆ ಪಾತ್ರವಾಗಿದೆ.
ಗುರುವಾರ ರಾತ್ರಿ ಮಾಣಿ ಸಮೀಪ ಬುಡೋಳಿಯ ಯುವತಿಯೊಬ್ಬರು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದು, ಆಂಬುಲೆನ್ಸ್‌ಗಾಗಿ ಸಂಬಂಧಪಟ್ಟವರು ಕರೆ ಮಾಡುತ್ತಿದ್ದಾಗ, ವಿಕೇಶ್ ಶೆಟ್ಟಿ ಅವರ ಗಮನಕ್ಕೆ ವಿಷಯ ಬಂದಿತ್ತು. ಈ ಸಂದರ್ಭ ತಮ್ಮ ಸ್ವಿಫ್ಟ್ ಕಾರನ್ನು ತೆಗೆದುಕೊಂಡು ಯುವತಿ ಹಾಗೂ ಅವರ ಸಂಬಂಧಿಕರನ್ನು ಕರೆದುಕೊಂಡು ರಾತ್ರಿ ಸುಮಾರು 8.30ರ ವೇಳೆಗೆ ಬುಡೋಳಿಯಿಂದ ಮಾಣಿಗೆ ಬಂದು ಅಲ್ಲಿಂದ ಪುತ್ತೂರು ಆಸ್ಪತ್ರೆಗೆ ತಲುಪಿದ್ದಾಗಿ ವಿಕೇಶ್ ಶೆಟ್ಟಿ ತಿಳಿಸಿದ್ದಾರೆ.
Kshetra Samachara
04/09/2021 06:28 pm