ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ಸಮಾನ ಮನಸ್ಕರ ದಾನಿಗಳ ಸಹಕಾರದಿಂದ 75ನೇ ಸ್ವಾತಂತ್ರೋತ್ಸವ ದಿನದಂದು ಮನೆ ಹಸ್ತಾಂತರ .

ವರದಿ :ದಾಮೋದರ ಮೊಗವೀರ ನಾಯಕವಾಡಿ

ಬೈಂದೂರು :ಬೈಂದೂರು ತಾಲ್ಲೂಕಿನ ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ರಿ ಸಾಲು ಎಂಬಲ್ಲಿ ಹಲವು ವರ್ಷಗಳಿಂದ ಚಿಕ್ಕದೊಂದು ಮುರುಕಲು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ಕಾವೇರಿ ಮೊಗವೀರ ಎಂಬುವವರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಉದಯ್ ಜೋಗಿ ನೇತೃತ್ವದಲ್ಲಿ ಮೊಗವೀರ ಸಂಘಟನೆ (ರಿ) ಉಡುಪಿ .ಹೆಮ್ಮಾಡಿ ನಾಡ ಘಟಕ ಹಾಗೂ ನಾಡಾ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಮನೆಯೊಂದನ್ನು ನಿರ್ಮಿಸಿ "ಅಮ್ಮಾ " ಹೆಸರಿನ ನಾಮಕರಣ ಮಾಡಿ ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ನೆರವೇರಿಸಿ ಕಾವೇರಿ ಮೊಗವೀರ ವರಿಗೆ ಮನೆಯ ಕೀ ಯನ್ನು ಹಸ್ತಾಂತರಿಸಿದರು .

ಹೌದು ಕಾವೇರಿ ಮೊಗವೀರ ತನಗರಿವಿರದ ವಯಸ್ಸಿನ ಬಾಲ್ಯದಲ್ಲಿಯೇ ಮದುವೆ ನಡೆದು ಹೋಗಿತ್ತು ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡ ಮರಣ ಹೊಂದಿದ ನಂತರ ತನಗೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿ ಮರುಗುತ್ತಾರೆ .

ಅಯ್ಯೋ ವಿಧಿ ಲಿಖಿತ ಎಂಬಂತೆ ಒಬ್ಬಂಟಿಯಾಗಿ ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಾರೆ .

ಹೀಗೆ ಹಲವು ವರ್ಷಗಳಿಂದ ಚಿಕ್ಕ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ಕಾವೇರಿ ಮೊಗವೀರ ರವರ ಮನೆಯ ಸಂಕಷ್ಟದ ವಸ್ತುಸ್ಥಿತಿ ಪರಿಸ್ಥಿತಿ ನೋಡಿ ಸ್ಪಂದಿಸಿ ತಕ್ಷಣ ಉದಯ್ ಜೋಗಿ ತನ್ನಿಂದಾಗುವ ಸಹಾಯ ಮಾಡಿ

ಮೊಗವೀರ ಸಂಘಟನೆಗೆ ಕಷ್ಟದ ಪರಿಸ್ಥಿತಿ ತಿಳಿಸಿ ತಮ್ಮಿಂದಾಗುವ ಸಹಾಯ ಮಾಡಿ ಎಂದು ಕೇಳಿಕೊಂಡಾಗ ತಕ್ಷಣ ಸಂಘಟನೆ ಸ್ಪಂದಿಸಿ ಮನೆ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿ ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆ .

ನಾಡ ಪಂಚಾಯತ್ ವತಿಯಿಂದ ತಮ್ಮ ಮಿತಿಗೆ ಬರುವಷ್ಟು ಹಣ ಸಹಾಯ ಮಾಡಿ ಮನೆ ನಿರ್ಮಾಣ ಮಾಡುವಲ್ಲಿ ಸಹಕಾರ ನೀಡಿ ಮಾನವೀಯತೆ ಮೆರೆದಿದ್ದಾರೆ .

ಗೃಹಪ್ರವೇಶ ಸಮಾರಂಭಕ್ಕೆ ಉದಯ್ ಜೋಗಿ .ಮೊಗವೀರ ಮೀನುಗಾರರ ಬಗ್ವಾಡಿ ಯುವ ಸಂಘಟನೆ ಅಧ್ಯಕ್ಷ ಪ್ರಭಾಕರ್ ನಾಯ್ಕ್ ಸೇನಾಪುರ ಮೊಗವೀರ ಮುಖಂಡರು ಹಾಗೂ ಪದಾಧಿಕಾರಿಗಳು. ನಾಡಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಮೊಗವೀರ . ಶರತ್ ಶೆಟ್ಟಿ ಗೋಪಾಲ್ ರಾಮ್ ನಗರ ಜಯ ಪೂಜಾರಿ ನಾಗೇಶ್ ಬೆದ್ರಾಡಿ ಹಾಗೂ ಊರಿನ ಸಮಸ್ತರು ಈ ಶುಭ ಸಮಯದಲ್ಲಿ ಉಪಸ್ಥಿತರಿದ್ದರು .

Edited By : Manjunath H D
Kshetra Samachara

Kshetra Samachara

19/08/2021 09:01 pm

Cinque Terre

16 K

Cinque Terre

0

ಸಂಬಂಧಿತ ಸುದ್ದಿ