ಮಂಗಳೂರು: ಲಾಕ್ಡೌನ್ನಲ್ಲಿ ಕೆಲಸ ಇಲ್ಲದ ವೇಳೆ ವಕೀಲೆಯೊಬ್ಬರು ತಾರಸಿ ಮೇಲೆ ಮಲ್ಲಿಗೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
ಮಂಗಳೂರಿನ ಕಿರಣ ಎಂಬುವವರು ವೃತ್ತಿಯಲ್ಲಿ ವಕೀಲರು. ಪ್ರವೃತ್ತಿಯಾಗಿ ಮಲ್ಲಿಗೆ ಬೆಳೆದು ಇದೀಗ ಕೈ ತುಂಬಾನೇ ಕಾಸು ಸಂಪಾದಿಸಿದ್ದಾರೆ. ಇವರಿಗೆ ಕೃಷಿಯಲ್ಲಿ ಆಸಕ್ತಿ ಸ್ವಲ್ಪ ಹೆಚ್ಚಿತ್ತು. ಹೀಗಾಗಿ ತಮ್ಮ ಮನೆ ತಾರಸಿ ಮೇಲೆ ಮಲ್ಲಿಗೆ ಕೃಷಿ ಮಾಡಿದ್ದಾರೆ.
ಆರು ತಿಂಗಳ ಹಿಂದೆ 90ಕ್ಕೂ ಹೆಚ್ಚು ಹೂ ಕುಂಡಗಳಲ್ಲಿ ಮಲ್ಲಿಗೆ ಬೆಳೆಯೋಕೆ ಶುರು ಮಾಡಿದ್ರು. ಇದರಿಂದಾಗಿ ತಿಂಗಳಿಗೆ ಕನಿಷ್ಠ 15 ಸಾವಿರ ಆದಾಯ ಇವರ ಕೈ ಸೇರುತ್ತಿದೆಯಂತೆ. ತಾರಸಿ ಮೇಲೆ ಮಲ್ಲಿಗೆ ಬೆಳೆದು ಕೈ ತುಂಬಾ ಕಾಸು ಸಂಪಾದಿಸಿದ ಇವರು ಮೊದಲಿಗೆ ಈ ಕೃಷಿ ಮಾಡಬೇಕಾದ್ರೆ ಕೆಲವರು ಏನೂ ಲಾಭ ಇಲ್ಲ. ಬೇಡ ಎಂದಿದ್ದರಂತೆ. ಆದರೆ ಕಿರಣ ಅವರು ಯಾರ ಮಾತಿಗೂ ಕಿವಿಗೊಡದೆ ಮಲ್ಲಿಗೆ ಬೆಳೆದು, ಇಂದು ಯಶಸ್ವಿಯಾಗಿದ್ದಾರೆ. ಇವ್ರ ಈ ಕೆಲಸಕ್ಕೆ ಅಕ್ಕನೂ ಕೈ ಜೋಡಿಸಿದ್ದಾರೆ.
Kshetra Samachara
06/08/2021 11:37 am