ಮಂಗಳೂರು: ಭಾರತದ ಖ್ಯಾತ ಕ್ರಿಕೆಟ್ ಆಲ್ ರೌಂಡರ್ ಯೂಸುಫ್ ಪಠಾಣ್ ಅವರು ಮಂಗಳೂರಿನ ಉಳ್ಳಾಲದ ವೀರ ರಾಣಿ ಅಬ್ಬಕ್ಕನ ನಾಡಿಗೆ ಬಂದಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಮಿಸಿದ ಅವರನ್ನು ಗೇಟ್ ವೇ ಹೋಟೆಲ್ ನಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.ಈ ಸಂದರ್ಭ ಉಳ್ಳಾಲ ನಗರಸಭೆಯ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಎಸ್ಡಿಪಿಐ ಮುಖಂಡ ಅಕ್ರಮ್ ಹಸನ್, ಕಾರ್ಪೊರೇಟರ್ ಲತೀಫ್ ಕಂದಕ್, ಉಳ್ಳಾಲ ಕೌನ್ಸಿಲರ್ ಅಬ್ದುಲ್ ಅಝೀಝ್, ಉದ್ಯಮಿ ಯು.ಟಿ. ಇಫ್ತಿಕಾರ್, ಮೋತಿಶ್ಯಾಮ್ ಬಿಲ್ಡರ್ಸ್ ಮಾಲೀಕ ಸೌದ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬಳಿಕ ಯೂಸುಫ್ ಪಠಾಣ್ ಸೀದಾ ಉಳ್ಳಾಲ ಕ್ರಿಕೆಟ್ ಮೈದಾನಕ್ಕೆ ತೆರಳಿದರು. ಈ ಸಂದರ್ಭ ಕ್ರಿಕೆಟ್ ಅಭಿಮಾನಿಗಳು ಮುಗಿಬಿದ್ದು, ಹರ್ಷ ವ್ಯಕ್ತಪಡಿಸಿದರು.
Kshetra Samachara
22/02/2021 08:35 pm