ಮಂಗಳೂರು:ಸೋಮೇಶ್ವರ ಸಮುದ್ರ ತೀರದಲ್ಲಿ ಇಂದು ನೀರುಪಾಲಾಗುತ್ತಿದ್ದ ಯುವತಿಯನ್ನು ಈಜುಗಾರರು ರಕ್ಷಿಸಿದ್ದಾರೆ.ಈ ಯುವತಿ ತನ್ನ ಸ್ನೇಹಿತೆಯರ ಜತೆಗೆ ಬೆಂಗಳೂರಿನಿಂದ ಕ್ಯಾಬ್ ಮೂಲಕ ಸುರತ್ಕಲ್ ಗೆ ಆಗಮಿಸಿದ್ದರು. ಬಳಿಕ ಸೋಮೇಶ್ವರ ದೇವಸ್ಥಾನದ ಬಳಿಯ ಸಮುದ್ರ ತೀರಕ್ಕೆ ಬಂದಿದ್ದರು.
ಸಮುದ್ರದಲ್ಲಿ ಆಟವಾಡುವ ವೇಳೆ ಬೃಹತ್ ಅಲೆ ಅಪ್ಪಳಿಸಿತ್ತು. ಈ ವೇಳೆ ಈಜುಗಾರ ಅಶೋಕ್ ಎಂಬವರು ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಸದ್ಯ ಯುವತಿ ಅಪಾಯದಿಂದ ಪಾರಾಗಿದ್ದಾರೆ.
ಕರಾವಳಿ ಕಾವಲು ಪಡೆಯ ರಕ್ಷಾ ಕವಚ ತಾಲೀಮು ಸಮುದ್ರದಲ್ಲಿ ನಡೆಯುತ್ತಿತ್ತು.ಈ ಹಿನ್ನೆಲೆಯಲ್ಲಿ ಅಶೋಕ್ ಸೇರಿದಂತೆ ಹೋಮ್ ಗಾರ್ಡ್ ಶಿವಪ್ರಸಾದ್ ಮತ್ತು ಕರಾವಳಿ ಕಾವಲು ಪಡೆಯ ಕಿರಣ್ ಅ್ಯಂಟನಿ ಅವರನ್ನು ನಿಯೋಜಿಸಲಾಗಿತ್ತು.
Kshetra Samachara
12/01/2021 04:30 pm