ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾಗಣಪತಿ ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ : ಮಗುವಿನ ಚಿಕಿತ್ಸೆಗಾಗಿ ಸಹಾಯ

ಮಂಗಳೂರು: ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಂಗಳೂರಿನ ಅಡ್ಯಾರು ಪದವಿನ ಅಂಬಿಕಾ ಸುರೇಶ್ ದಂಪತಿಯ ನಾಲ್ಕೂವರೆ ವರ್ಷದ ಮಗು ದರ್ಶನ್'ನ ಆರೋಗ್ಯದ ಸಮಸ್ಯೆ ರಕ್ತದ ಕ್ಯಾನ್ಸರ್ (ಬ್ಲಡ್ ಕ್ಯಾನ್ಸರ್)ನ ಚಿಕಿತ್ಸೆಗಾಗಿ ಸಂಗ್ರಹಿದ ಒಂದು ಲಕ್ಷ ಹದಿನೈದು ಸಾವಿರ(1,15,000/-) ರೂಪಾಯಿಗಳನ್ನು ಮಹಾಗಣಪತಿ ಸೇವಾ ಟ್ರಸ್ಟ್'ನ ವತಿಯಿಂದ ಅಂಬಿಕಾರವರ ಅಡ್ಯಾರು ಪದವಿನ ಮನೆಯಲ್ಲಿ ಮಗುವಿನ ತಾಯಿ ಅಂಬಿಕಾ'ರವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತಂಡದ ನಿರ್ವಾಹಕರು ಹಾಗೂ ಸದಸ್ಯರುಗಳಾದ ಪ್ರದೀಪ್ ಪೂಜಾರಿ ತುಳುವೆ, ನರೇಶ್ ನಾಯಕ್, ನಿಕಿತಾ ಗಾಣಿಗ, ಸಂತೋಷ್ ಪೂಜಾರಿ, ಕುಮಾರಿ ಸ್ವಾತಿ, ಕುಮಾರಿ ದೀಪಾ, ಹಾಗೂ ಪ್ರಶಾಂತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

11/01/2021 01:50 pm

Cinque Terre

12.86 K

Cinque Terre

2

ಸಂಬಂಧಿತ ಸುದ್ದಿ