ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ದರೆಗುಡ್ಡೆಯ ರಾಜೇಶ್ ಕುಟುಂಬಕ್ಕೆ "ಆಸರೆ" ನೀಡಿದ ರಾಜಕೇಸರಿ

ಮೂಡುಬಿದಿರೆ: ದಿನಕೂಲಿ ಕಾರ್ಮಿಕರ ಸಂಘಟನೆ ಅಖಿಲ ಕರ್ನಾಟಕ ರಾಜಕೇಸರಿ ಬೆಳ್ತಂಗಡಿ ಮತ್ತು ಮೂಡುಬಿದಿರೆ ತಾಲೂಕು ಘಟಕ ಆಶ್ರಯದಲ್ಲಿ ನಿರ್ಮಾಣವಾಗಿರುವ 32ನೇ ಆಸರೆ ಮನೆಯನ್ನು ಅನಾರೋಗ್ಯ ಪೀಡಿತ ದರೆಗುಡ್ಡೆಯ ರಾಜೇಶ್ ಪೂಜಾರಿ ಅವರಿಗೆ ಭಾನುವಾರ ಸಂಘಟನೆ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಹಸ್ತಾಂತರಿಸಿದರು.

ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಉದ್ಘಾಟಿಸಿದರು.

ದರೆಗುಡ್ಡೆ ಕೆಲ್ಲಪುತ್ತಿಗೆ ವೀರಮಾರುತಿ ಕ್ರೀಡಾಂಗಣದಲ್ಲಿ ನಡೆದ ಮನೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ಜಯಂತ್ ನಡುಬೈಲು ವಹಿಸಿದ್ದರು. ಈ ಸಂದರ್ಭ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಮತ್ತು ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ಪ್ರವೀಣ್ ಕೋಟ್ಯಾನ್ ಪಣಪಿಲ ಅವರನ್ನು ಸನ್ಮಾನಿಸಲಾಯಿತು.

ರಾಜಕೇಸರಿ ಮೂಡುಬಿದಿರೆ ತಾ. ಅಧ್ಯಕ್ಷ ಕಿಶೋರ್, ದರೆಗುಡ್ಡೆ ನಿ.ಪೂ. ಉಪಾಧ್ಯಕ್ಷ ಮುನಿರಾಜ್ ಹೆಗ್ಡೆ, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬಿಜೆಪಿ ಜಿಲ್ಲಾ ಯುವಮೋರ್ಚಾದ ಪ್ರವೀಣ್ ನೆಟ್ಟಾರು, ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ ವೇಣುಗೋಪಾಲ್, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿ ಕುಂಞ, ಎಪಿಎಂಸಿ ಸದಸ್ಯ ಅಶೋಕ್ ಶೆಟ್ಟಿ ಬೇಲೊಟ್ಟು, ಉದ್ಯಮಿ ಕುಮಾರ್ ಪೂಜಾರಿ ಇರುವೈಲು, ಹಿಂಜಾವೇ ಮೂಡುಬಿದಿರೆ ತಾ. ಅಧ್ಯಕ್ಷ ಸಮಿತ್‍ರಾಜ್, ಗ್ರಾಪಂ ಮಾಜಿ ಸದಸ್ಯ ಜಯಕುಮಾರ್ ಶೆಟ್ಟಿ, ಆಲಡ್ಕ ಹಿಂದೂ ಯುವಶಕ್ತಿ ಅಧ್ಯಕ್ಷ ದೇವದಾಸ್ ಸಾಲ್ಯಾನ್, ರಾಜಕೇಸರಿ ಜಿಲ್ಲಾಧ್ಯಕ್ಷ ಅಶೋಕ್ ಎಸ್. ಮಾಲೆಮಾರ್, ಕಾರ್ಕಳ ಅಧ್ಯಕ್ಷ ಸಂಪತ್ ಭಂಡಾರಿ, ಬೆಳ್ತಂಗಡಿ ಅಧ್ಯಕ್ಷ ಕಾರ್ತಿಕ್, ರಾಮಸೇನೆ ತಾಲೂಕು ಅಧ್ಯಕ್ಷ ಅಶೋಕ ಆಳ್ವ ಭಾಗವಹಿಸಿದರು.

ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಮ್‍ಕುಮಾರ್ ಮಾರ್ನಾಡು ಮತ್ತು ಶುಭಕರ ಅಂಚನ್ ನಿರೂಪಿಸಿ, ಸಂದೀಪ್ ವಂದಿಸಿದರು.

ಕಾರ್ಯಕ್ರಮಕ್ಕೆ ಟೆಲಿಕಾನ್ಪರೆನ್ಸ್ ಮೂಲಕ ಶುಭ ಹಾರೈಸಿದ ಬೆಂಗಳೂರು ಎಸ್‍ಪಿ ರವಿ ಡಿ. ಚೆನ್ನಣ್ಣನವರ್ ಅವರು `ಬಡ ಕುಟುಂಬದಿಂದ ಬಂದ ತಾನು, ಕೂಲಿ ಕಾರ್ಮಿಕರು ಒಂದಾಗಿ ಅಶಕ್ತರಿಗೆ ನೆರವಾಗುತ್ತಿರುವ `ರಾಜಕೇಸರಿ' ಸಂಘಟನೆಯಿಂದ ಪ್ರಭಾವಿತನಾಗಿದ್ದೇನೆ. ನಾಡು ಕಟ್ಟುವ ಇಚ್ಛಾಶಕ್ತಿ ಇಲ್ಲಿದೆ. ರಾಜಕೇಸರಿಯ 33ನೇ ಮನೆಯನ್ನು ತಾನು ಪೂರ್ಣ ಪ್ರಾಯೋಜಿಸುತ್ತೇನೆ ಎಂದು ಘೋಷಿಸಿದರು.

Edited By : Nagaraj Tulugeri
Kshetra Samachara

Kshetra Samachara

22/11/2020 05:04 pm

Cinque Terre

19.84 K

Cinque Terre

1

ಸಂಬಂಧಿತ ಸುದ್ದಿ