ಮುಲ್ಕಿ: ದೀಪಾವಳಿಯ ಸಂಭ್ರಮಾಚರಣೆಗೆ ಮುಲ್ಕಿ ಸಮೀಪದ ಶಿಮಂತೂರು ಯುವಕರಿಂದ ಹಳೆಯ ಸ್ಪ್ರೈಟ್ ಬಾಟಲಿಗಳಿಂದ ವಿಶಿಷ್ಟ ರೀತಿಯಲ್ಲಿ ಗೂಡುದೀಪ ರಚಿಸಲಾಗಿದ್ದು, ಗಮನ ಸೆಳೆಯುತ್ತಿದೆ.
ಮುಲ್ಕಿ ಸಮೀಪದ ಶಿಮಂತೂರಿನ ಯುವಕರ ತಂಡ "ಕಸದಿಂದ ರಸ" ಎಂಬಂತೆ ಸುಮಾರು 56 ಹಳೆಯ ಸ್ಪ್ರೈಟ್ ಬಾಟಲನ್ನು ಸಂಗ್ರಹಿಸಿ ಗೂಡು ದೀಪ ತಯಾರಿಸಲಾಗಿದ್ದು ದೇವಳದ ಎದುರು ಭಾಗದಲ್ಲಿ ಭಕ್ತರ ಗಮನ ಸೆಳೆಯುತ್ತಿದೆ.
ಶಿಮಂತೂರು ಯುವಕರ ಪ್ರಕಾರ ಪ್ಲಾಸ್ಟಿಕ್ ಬಳಕೆಯನ್ನು ಮಿತ ವಿನಿಯೋಗ ಮಾಡುವ ಧ್ಯೇಯ ಇಟ್ಟುಕೊಂಡು ಗೂಡು ದೀಪ ತಯಾರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿಮಂತೂರಿನ ಯುವಕರ ಸಂಘಟನೆ ಶಿಮಂತೂರು ಪರಿಸರದಲ್ಲಿ ಶ್ರಮದಾನ ಸಹಿತ ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮುಖಾಂತರ ಜನಸೇವೆ ಮಾಡುತ್ತಿದ್ದು, ಇದೀಗ ಗೂಡು ದೀಪದ ಮೂಲಕ ಪ್ಲಾಸ್ಟಿಕ್ ಮಿತ ಬಳಕೆಗೆ ಒತ್ತು ನೀಡಿದ ಸಂಘಟನೆಯ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.
Kshetra Samachara
16/11/2020 07:42 pm