ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮರುಭೂಮಿಯಲ್ಲಿ 'ಹಸಿರು ಕ್ರಾಂತಿ'ಗೆ ಮುನ್ನುಡಿ ಬರೆದ ಕನ್ನಡಿಗ!

ಮಂಗಳೂರು: ಅರಬ್ ರಾಷ್ಟ್ರ ಅಂದ್ರೆ ಸಾಕು, ಕಣ್ಣ ಮುಂದೆ ಬರೋದು ಮರುಭೂಮಿ ಮಾತ್ರ. ಜೊತೆಗೆ ಸಾಲು ಸಾಲು ಖರ್ಜೂರದ ಮರಗಳು. ಆದರೆ, ಅಂತಹ ಪಾಳು ಬಿದ್ದ, ಬರಡು ಭೂಮಿಯಲ್ಲು ಹಚ್ಚ ಹಸುರಿನ ಕೃಷಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಕರಾವಳಿಯಿಂದ ಅರಬ್ ರಾಷ್ಟ್ರಕ್ಕೆ ಉದ್ಯೋಗ ಅರಸಿ ಹೋದವರು...

ಹೌದು, ಅಬುಧಾಬಿಯಿಂದ ದುಬೈಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಿಗುವ ಫಾಮ್ ಪ್ರದೇಶದಲ್ಲಿ ಭಾರತೀಯ ಪ್ರಜೆಗಳು ಕೃಷಿ ಆಂದೋಲನ ನಡೆಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಾಳುಬಿದ್ದ 70ಕ್ಕೂ ಮಿಕ್ಕ ಸೆನ್ಸ್ ಖಾಲಿ ಭೂಮಿಯನ್ನು ಫಲವತ್ತಾದ ಕೃಷಿ ಭೂಮಿಯಾಗಿ ಮಾಡಿ ಬೆಳೆ ತೆಗೆದಿದ್ದಾರೆ.

26 ವರ್ಷಗಳಿಂದ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಬಂಟ್ವಾಳ ತಾಲೂಕಿನ ದಂಡೆಗೋಳಿ ಪಿಎಸ್ ಇಬ್ರಾಹಿಂ ಅವರ ಪುತ್ರ ಮುಹಮ್ಮದ್ ಅಲಿ ದಂಡೆಗೋಳಿ ತಾನು ಕೆಲಸ ಮಾಡುತ್ತಿರೋ ಸಂಸ್ಥೆಯ ಮುಖ್ಯಸ್ಥರು ನೀಡಿದ ಜಾಗದಲ್ಲಿ ಕೃಷಿ ಪ್ರಾರಂಭಿಸಿದ್ದರು. ಪಾಳು ಬಿದ್ದ ಜಾಗದಲ್ಲಿ ಏನು ತಾನೇ ಮಾಡಲು ಸಾಧ್ಯ ? ಇದು ಸಾಮಾನ್ಯ ಪ್ರಶ್ನೆ.

ಆದರೆ, ತನ್ನ ಅವಿರತ ಪರಿಶ್ರಮದಿಂದ ಮುಹಮ್ಮದ್ ಆಲಿ, ಅವರ ಪತ್ನಿ ಮತ್ತು ಮಡಿಕೇರಿಯ ಅಬ್ದುಲ್ ಮಜೀದ್ ಎಂಬವರು ಬರಡು ಭೂಮಿಯತ್ತ ಎಲ್ಲರ ಚಿತ್ತ ಹರಿವಂತೆ ಮಾಡಿದ್ದಾರೆ. ಕೃಷಿ ಜೊತೆಗೆ ಕೋಳಿ ಸಾಕಾಣಿಕೆ, ಆಡು, ಕುರಿ, ಬೆಕ್ಕು ಸೇರಿದಂತೆ ಹಲವಾರು ಸಾಕುಪ್ರಾಣಿಗಳಿಗೆ ಆಶ್ರಯವನ್ನೂ ನೀಡಿದ್ದಾರೆ.

ಪಾಳು ಬಿದ್ದ ಬರಡು ಭೂಮಿಯಲ್ಲಿ ಮಾವು, ಈರುಳ್ಳಿ, ಕಲ್ಲಂಗಡಿ, ಟೊಮೆಟೊ ಇತ್ಯಾದಿ ತರಕಾರಿಗಳು ನಳನಳಿಸುತ್ತಿದೆ, ಪಾಳು ಬಿದ್ದ ಜಾಗದಲ್ಲಿ ಹೊನ್ನನ್ನೇ ಸೃಷ್ಟಿಸಿರೋ ಮುಹಮ್ಮದ್ ಆಲಿ ಯವರ ಕಾರ್ಯ ಎಲ್ಲರ ಹುಬ್ಬೇರುವಂತೆ ಮಾಡಿದೆ. ಒಟ್ಟಿನಲ್ಲಿ ಕೃಷಿ ಪ್ರಧಾನ ರಾಷ್ಟ್ರದಿಂದ ತೆರಳಿದ ವ್ಯಕ್ತಿಯೊಬ್ಬರು ಮರುಭೂಮಿಯಲ್ಲಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಅನ್ನೋದು ಶ್ಲಾಘನೀಯ.

Edited By : Manjunath H D
Kshetra Samachara

Kshetra Samachara

14/11/2020 04:38 pm

Cinque Terre

33.82 K

Cinque Terre

4

ಸಂಬಂಧಿತ ಸುದ್ದಿ