ಮುಲ್ಕಿ : ಎಮ್‌ಆರ್‌ಪಿಎಲ್ - ಒಎನ್‌ಜಿಸಿ ಡಿಸ್ಪ್ಲೇಸ್ಡ್ ಎಂಪ್ಲಾಯೀಸ್ ವೆಲ್ಪೇರ್ ಎಸೋಸಿಯೇಶನ್‌ನಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಚೇಳಾರು ನಿರ್ವಸಿತ ಕಾಲನಿಯ ಸಭಾಭವನದಲ್ಲಿ ಮತ್ತು ಎಸ್ ಇ ಝೆಡ್ ನಿರ್ವಸಿತರ ಕಾಲನಿಯ ತೋಕೂರು ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ೧೦ನೇ ಮತ್ತು ೧೨ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಪಡೆದು ಸಾಧನೆಗೈದ ಎಮ್‌ಆರ್‌ಪಿಎಲ್ - ಒಎನ್‌ಜಿಸಿ ಹಾಗೂ ಎಸ್‌ಇ ಝೆಡ್ ನಿರ್ವಸಿತರ ಕುಟುಂಬಗಳ ೩೨ ವಿದ್ಯಾರ್ಥಿಗಳನ್ನು ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು. ಸ್ನಾತಕ ಪದವಿ ವ್ಯಾಸಂಗ ಮಾಡುತ್ತಿರುವ ೪ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಲಾಯಿತು.
ಚೇಳಾರು ನಿರ್ವಸಿತ ಕಾಲನಿಯ ಸಭಾಭವನ ಹಾಗೂ ಎಸ್ ಇ ಝೆಡ್ ನಿರ್ವಸಿತರ ಕಾಲನಿಯ ತೋಕೂರು ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳುವಾರು ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರಾವ್ ಹಾಗೂ ರಾಮಚಂದ್ರ ರಾವ್ ಅತಿಥಿಯಾಗಿದ್ದರು. ಎಮ್‌ಆರ್‌ಪಿಎಲ್ - ಒಎನ್‌ಜಿಸಿ ಡಿಸ್ಪ್ಲೇಸ್ಡ್ ಎಂಪ್ಲಾಯೀಸ್ ವೆಲ್ಪೇರ್ ಎಸೋಸಿಯೇಶನ್ ನ ಸ್ಥಾಪಕಾಧ್ಯಕ್ಷ ರಘುರಾಮ್ ತಂತ್ರಿ ಸ್ವಾಗತಿಸಿದರು. ಅಧ್ಯಕ್ಷ ರವಿ ಬಿ ಗುಜರನ್ ಶುಭ ಹಾರೈಸಿದರು. ಕಾರ್ಯದರ್ಶಿ ಲಕ್ಷ್ಮೀಶ ಎಂ ಅಂಚನ್ ವಂದಿಸಿದರು. ಶ್ರೀಶ ಕರ್ಮರನ್ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಚೇಳಾರು ಪಂಚಾಯತ್ ಸದಸ್ಯೆ ರೇಖಾ, ಗಂಗಾಧರ ಪೂಜಾರಿ ಚೇಳಾರು, ಎಮ್ ಆರ್ ಪಿ ಎಲ್ - ಒ ಎನ್ ಜಿ ಸಿ ಡಿಸ್ಪ್ಲೇಸ್ಡ್ ಎಂಪ್ಲಾಯೀಸ್ ವೆಲ್ಪೇರ್ ಎಸೋಸಿಯೇಶನ್ ನ ಪದಾಧಿಕಾರಿಗಳಾದ ಗುರುರಾಜ್ ರಾವ್, ಜಯೇಶ್ ಗೋವಿಂದ್, ಪ್ರಕಾಶ್ ಬಾಳ, ದತ್ತಾತ್ರೇಯ ಬಿ, ದಿನೇಶ್ ಶೆಟ್ಟಿ, ಸುನಿಲ್ ಶೆಟ್ಟಿ, ಉಮೇಶ್ ಪೂಜಾರಿ, ದಾಮೋದರ ಶೆಟ್ಟಿ, ಹರೀಶ್ ಬಂಗೇರ, ಕಿರಣ್ ಕುಮಾರ್, ಗುರುರಾಜ್ ರಾವ್, ಮಹಾಬಲ, ಉದಯ ಕುಮಾರ್, ಶಿವಾನಂದ, ಚೇತನ್ ಬಿ ಅಮೀನ್, ಸ್ಮಿತಾ ಭಂಡಾರಿ, ಸ್ಮಿತಾ ರತ್ನಾಕರ್, ವಿವೇಕ್, ಪ್ರಸನ್ನ, ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
06/11/2020 02:27 pm