ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮತ್ತೆ ಕಾಣುತ್ತೇವೆಂಬ ಭರವಸೆ ಕಳಕೊಂಡ ಮಕ್ಕಳಿಗೆ ಸಿಕ್ಕ ಹೆತ್ತವ್ವ!- 5 ವರ್ಷ ಬಳಿಕ ಪುನರ್ಮಿಲನ

ಮಂಗಳೂರು: ನಾಪತ್ತೆಯಾಗಿದ್ದ ತಾಯಿಯನ್ನು ಮತ್ತೆ ನೋಡುತ್ತೇವೆಂಬ ಭರವಸೆಯನ್ನೇ ಕಳೆದುಕೊಂಡ ಮಕ್ಕಳು. ಆದರೆ, ವಿಧಿಲೀಲೆ ಬೇರೆಯೇ ಇತ್ತು. ಒಂದು ಸಣ್ಣ ಕ್ಲೂ, ದೂರಾದ ತಾಯಿ-ಮಕ್ಕಳನ್ನು 5 ವರ್ಷಗಳ ಬಳಿಕ ಒಂದು ಮಾಡಿಯೇ ಬಿಟ್ಟಿದೆ. ಮಕ್ಕಳಿಗೆ ತಾಯಿ ಸಿಕ್ಕ ಸಂತೋಷ ಒಂದೆಡೆಯಾದರೆ, ಉಮ್ಮಳಿಸಿ ಬರುತ್ತಿದ್ದ ಕಣ್ಣೀರು ಇನ್ನೊಂದೆಡೆ. ಈ ದೃಶ್ಯಕ್ಕೆ ಸಾಕ್ಷಿಯಾದದ್ದು, ಮಂಗಳೂರಿನ ವೈಟ್‌ಡೌಸ್ ಸಂಸ್ಥೆ.

ಹೌದು... ಅಸ್ಮಾ ಎಂಬ ಈ ಮಹಿಳೆ 2019ರ ಜೂನ್‌ 9ರ ನಡುರಾತ್ರಿ ಮಂಗಳೂರಿನ ಪಣಂಬೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವೈಟ್‌ಡೌಸ್ ಸಂಸ್ಥೆಯ ಸಂಸ್ಥಾಪಕಿ‌ ಕೊರಿನಾ ರಸ್ಕಿನ್‌ರಿಗೆ ಸಿಕ್ಕಿದವರು. ಮಾನಸಿಕ ಸ್ಥಿಮಿತ ಕಳೆದುಕೊಂಡ ಅಸ್ಮಾ ಅದು ಹೇಗೋ ಮಹಾರಾಷ್ಟ್ರದಿಂದ ಮಂಗಳೂರಿಗೆ ಬಂದಿದ್ದರು. ಹೀಗೇ ಬಿಟ್ಟರೆ ಬೀದಿ ಕಾಮುಕರ ಕೈಗೆ ಸಿಕ್ಕರೆ ಖಂಡಿತಾ ನಲುಗಿ ಹೋಗುತ್ತಾಳೆಂದು ಕೊರಿನಾ ರಸ್ಕಿನ್ ಆಕೆಯನ್ನು ರಕ್ಷಿಸಿ ನಿರ್ಗತಿಕರ ಆಶ್ರಯತಾಣ ವೈಟ್‌ಡೌಸ್‌ಗೆ ಕರೆ ತರುತ್ತಾರೆ. ಬಳಿಕ ಅಸ್ಮಾ ನೀಡಿರುವ ವಿಳಾಸವನ್ನು ಇಟ್ಟುಕೊಂಡು ಆಕೆಯ ಮನೆಯವರನ್ನು ಪತ್ತೆ ಹಚ್ಚಲು ಮುಂದಾದರೂ ಪ್ರತಿಫಲ ಸಿಕ್ಕಿರಲಿಲ್ಲ.

ಇತ್ತೀಚೆಗೆ ಮುಂಬೈನ ಬೈಕಲಾದ ತವರುಮನೆಯ ವಿಳಾಸ ಕೊಡುತ್ತಾಳೆ ಅಸ್ಮಾ. ಆ ವಿಳಾಸದ ಜಾಡು ಹಿಡಿದು ಬೈಕಲಾ ಪೊಲೀಸ್ ಠಾಣೆ ಸಂಪರ್ಕಿಸಿದ ವೈಟ್‌ಡೌಸ್ ಸಂಸ್ಥೆಗೆ ಅಸ್ಮಾ ಮನೆಯವರು ಸಂಪರ್ಕಕ್ಕೆ ಸಿಗುತ್ತಾರೆ. ತಕ್ಷಣ ಫ್ಲೈಟ್ ಹತ್ತಿ ಬಂದ ಅಸ್ಮಾ ಮನೆಯವರು ಆಕೆಯನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ಅಸ್ಮಾ ಹತ್ತಾರು ವರ್ಷಗಳ ಕಾಲ ಪತಿಯೊಂದಿಗೆ ವಿದೇಶದಲ್ಲಿದ್ದವರು. ಬಳಿಕ ಮುಂಬೈನ ಥಾಣೆಯ ಮಂಬ್ರಿಲ್‌ನ ಪತಿ ಮನೆಯಲ್ಲಿದ್ದಳು. ಈ ನಡುವೆ ಮಾನಸಿಕವಾಗಿ ಅಸ್ವಸ್ಥರಾಗಿದ್ದ ಅಸ್ಮಾ, ಪತಿ ಮನೆಯಿಂದ ತಾಯಿಮನೆ ನಡುವೆ ರೈಲಿನಲ್ಲಿ ಓಡಾಟ ಮಾಡುತ್ತಿದ್ದವರು 2019ರ ಮೇ ತಿಂಗಳಲ್ಲಿ ಅದು ಹೇಗೋ ಮನೆಯಿಂದ ನಾಪತ್ತೆಯಾಗಿದ್ದಾರೆ. ಇದೀಗ 5 ವರ್ಷಗಳ ಬಳಿಕ ಅಸ್ಮಾ ಮನೆಗೆ ಹಿಂತಿರುಗಿದ್ದಾರೆ. ಇನ್ನಾದರೂ ಆಕೆಯ ಬಾಳು ಹಸನಾಗಲಿ ಎಂಬುದೇ ನಮ್ಮ ಆಶಯ.

Edited By : Ashok M
PublicNext

PublicNext

03/11/2024 08:33 pm

Cinque Terre

42.48 K

Cinque Terre

1

ಸಂಬಂಧಿತ ಸುದ್ದಿ