ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಯಕ್ಷ ಕಲಾವಿದ, ಪ್ರಸಿದ್ಧ ಸ್ತ್ರೀವೇಷಧಾರಿ ಚಿಟ್ಟಾಣಿ ರಾಮ ಹೆಗಡೆ ನಿಧನ

ಉಡುಪಿ: ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ,ಸ್ತ್ರೀವೇಷಧಾರಿ ಚಿಟ್ಟಾಣಿ ರಾಮ ಹೆಗಡೆ (82) ನಿಧನರಾದರು. ದೀರ್ಘಕಾಲ ಗುಂಡುಬಾಳ ಮೇಳ ಮತ್ತು ಭರತನ ಹಳ್ಳಿ ಸಾಲಿಗ್ರಾಮ ಮೇಳಗಳಲ್ಲೂ ಕಲಾ ಸೇವೆಗೈದಿದ್ದರು. ಪೌರಾಣಿಕ ಸ್ತ್ರೀ, ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದ ಅವರು ಐದು ದಶಕಗಳ ಕಲಾಸೇವೆಗೈದಿದ್ದರು. ಸಂಸ್ಥೆ ಅವರಿಗೆ ಹತ್ತು ವರ್ಷದ ಹಿಂದೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

01/01/2025 02:40 pm

Cinque Terre

6.52 K

Cinque Terre

0