ಉಡುಪಿ: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ZEISS ಅಡ್ವಾನ್ಸ್ ಕಾಟ್ರಾಕ್ಟ್ ಸರ್ಜರಿ ಡಿಜಿಟಲ್ ಸಿಸ್ಟಮ್ ಉದ್ಘಾಟನೆಯನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೆರವೇರಿಸಿದರು. ಅವರೊಂದಿಗೆ ಶಾಸಕರಾದ ಕೆ. ರಘುಪತಿ ಭಟ್ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಎಚ್. ಎಸ್ ಬಲ್ಲಾಲ್, ಉತ್ತರ ಪ್ರದೇಶ ಹಾಗೂ ಉತ್ತರಖಂಡ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಾಧಿಪತಿಗಳಾದ ತನ್ಮಯ್ ಗೋಸ್ವಾಮಿ, ಉಡುಪಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಅಂಡಾರು ದೇವಿಪ್ರಸಾದ್ ಶೆಟ್ಟಿ, ನ್ಯಾಷನಲ್ ಅಕೌಂಟ್ ಮತ್ತು ಸ್ಟಾರ್ಟ್ಸ್ ಹಿರಿಯ ಸಲಹೆಗಾರರಾದ ರಾಮಚಂದ್ರ ಭಟ್, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕರಾದ ಡಾll. ಕೃಷ್ಣ ಪ್ರಸಾದ್ ಕೂಡ್ಲು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Kshetra Samachara
08/10/2022 05:10 pm