ಮುಲ್ಕಿ:ಮಹಿಳಾಮತ್ತುಮಕ್ಕಳಅಭಿವೃದ್ಧಿಇಲಾಖೆ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೇವಸ್ಥಾನ ಯುವಕ ಯುವತಿ ಮಂಡಳಿ ಸಹಭಾಗಿತ್ವದಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಕಿನ್ನಿಗೋಳಿ ಸಮೀಪದ ಗಿಡಿಗೆರೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದುರ್ಗಾಂಬಿಕ ಯುವಕ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಮುಗೇರ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಹಾಕಾಳಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾದ ದಯಾನಂದ, ದುರ್ಗಾಂಬಿಕಾ ಯುವತಿ ಮಂಡಲದ ಅಧ್ಯಕ್ಷರಾದ ಭವಾನಿ, ಅಂಗನವಾಡಿ ಮೇಲ್ವಿಚಾರಕಿ ಇಂದಿರಾ, ವೈದ್ಯಾಧಿಕಾರಿ ಡಾ ಶೋಭಾರಾಣಿ ಎಂಎಸ್, . ಡಾ ಅಶ್ವಕ್ ಹುಸೇನ್. ಆಳ್ವಾಸ್ ವೈದ್ಯಕೀಯ ಮಹಾವಿದ್ಯಾಲಯದ ಕಲಿಕಾ ವೈದ್ಯೆ ರೇಷ್ಮಾ, ಶುಶ್ರೂಷಕ ಅಧಿಕಾರಿ ಪ್ರಣೀತ್ ಹಾಗೂ ಪ್ರಸಾದ್. ಅಂಗನವಾಡಿ ಕಾರ್ಯಕರ್ತೆ ಎಲ್ಸಿ ಸಿಕ್ವೇರಾ ಹಾಗೂ ವಸಂತಿ ಭಾಗವಹಿಸಿದರು.
ಚಿಕಿತ್ಸಾ ಶಿಬಿರದಲ್ಲಿ ಆಯುರ್ವೇದ ಯುನಾನಿ ಹೋಮಿಯೋಪತಿ ಹಾಗೂ ನ್ಯಾಚುರೋಪತಿ ಚಿಕಿತ್ಸಾ ಪದ್ಧತಿಗಳನ್ನು ಒಳಗೊಂಡ ಔಷಧಿಗಳನ್ನು ಕೊಡಲಾಯಿತು.
Kshetra Samachara
20/11/2021 06:19 pm