ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮೊದಲ ದಿನವೇ ಲಸಿಕೆ ಅಭಿಯಾನದಲ್ಲಿ ತೊಡಕು ಉಂಟಾಗಿದೆ.ಹಿರಿಯ ನಾಗರಿಕರಿಗೆ
ಕೊರೋನಾ ಲಸಿಕೆ ನೀಡುವಿಕೆಯಲ್ಲಿ ತಾಂತ್ರಿಕ ಅಡಚಣೆ ಕಾಣಿಸಿಕೊಂಡಿದೆ.
ಈ ಮಧ್ಯೆಯೂ ಮೊದಲ ದಿನ ಒಟ್ಟು 87ಮಂದಿಗೆ ಲಸಿಕೆ ನೀಡಲಾಗಿದೆ.ಈ ಪೈಕಿ 40ರಿಂದ 59ವರ್ಷ ವಯಸ್ಸಿನ 2 ಮಂದಿ ಹಾಗೂ 60ವರ್ಷ ಮೇಲ್ಪಟ್ಟ 85ಮಂದಿಗೆ ಲಸಿಕೆ ವಿತರಿಸಲಾಗಿದೆ.ತಾಂತ್ರಿಕ ಸಮಸ್ಯೆಯಿಂದ ವಿಳಂಭವಾಗಿ ಲಸಿಕೆ ಆರಂಭಗೊಂಡಿದ್ದು,12:30ಕ್ಕೆ ಆರಂಭವಾಗಬೇಕಿದ್ದ ಲಸಿಕೆ ಮಧ್ಯಾಹ್ನ 3:30ಕ್ಕೆ ಆರಂಭಗೊಂಡಿತ್ತು.ಉಡುಪಿ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ 6 ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ.
ಕೋವಿನ್ 2.O ಆ್ಯಪ್ ತಾಂತ್ರಿಕ ದೋಷದಿಂದ ವ್ಯಾಕ್ಸಿನೇಶನ್ ವಿಳಂಬಗೊಂಡಿದ್ದರಿಂದ
ಲಸಿಕೆ ಸಿಗದವರಿಗೆ ನಾಳೆ ಲಸಿಕೆ ನೀಡಲಾಗುತ್ತಿದೆ.
Kshetra Samachara
01/03/2021 10:34 pm