ಮುಲ್ಕಿ: ಜೇಸಿಐ ಮುಲ್ಕಿ ಶಾಂಭವಿ, ಮುಲ್ಕಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್, ಶ್ರೀರಾಮ ಸೇವಾ ಮಂಡಳಿ ಕಾರ್ನಾಡು, ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಮಾನಂಪಾಡಿ ಸಂಯುಕ್ತಾಶ್ರಯದಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ಉಚಿತ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮ ಭಾನುವಾರ ಬೆಳಗ್ಗೆ ಮುಲ್ಕಿಯ ಮಾನಂಪಾಡಿ ಶ್ರೀ ವೀರಭದ್ರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಸಮಾರಂಭವನ್ನು ದೇವಸ್ಥಾನದ ಗುರಿಕಾರರಾದ ಚಂದಪ್ಪ ಗುರಿಕಾರ ಅವರು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜನತೆಗೆ ಸರಕಾರದ ಸವಲತ್ತು ಒದಗಿಸುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್, ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ , ದೇವಳದ ಆಡಳಿತ ಮೊಕ್ತೇಸರ ಪುರಂದರ ಶೆಟ್ಟಿಗಾರ್, ವೆಂಕಟರಮಣ ದೇವಸ್ಥಾನದ ಮ್ಯಾನೇಜರ್ ಸುರೇಂದ್ರ ಶೆಣೈ, ಉದ್ಯಮಿ ರಾಲ್ಫಿ ಡಿಕೋಸ್ತ, ಮುಲ್ಕಿ ಜೇಸಿ ಅಧ್ಯಕ್ಷ ದಿನೇಶ್ ಶೆಟ್ಟಿ, ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಮಾರು 500ಕ್ಕೂ ಅಧಿಕ ಗ್ರಾಮೀಣ ಜನರಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.
Kshetra Samachara
07/02/2021 11:28 am