ಮಂಗಳೂರು: ಕೇರಳ ರಾಜ್ಯದ ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದ ಮೂಲಕ ರಸ್ತೆ ಮಾರ್ಗವಾಗಿ ಕೇರಳಕ್ಕೆ ಸಂಚರಿಸುವುದರಿಂದ, ಮಂಗಳೂರಿನ ವಿಮಾನ ನಿಲ್ದಾಣದ ಸಿಬ್ಬಂದಿಗೆ ಮಂಕಿ ಫಾಕ್ಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ ನೀಡಿದರು.
ಮಂಗಳೂರು ವಿಮಾನ ನಿಲ್ದಾಣದ ಕಾನ್ಫರೆನ್ಸ್ ಹಾಲ್‍ನಲ್ಲಿ ಮಂಕಿ ಪಾಕ್ಸ್ ರೋಗದ ಮುಂಜಾಗೃತಾ ಕ್ರಮಗಳ ಬಗ್ಗೆ ಸಭೆ ನಡೆಸಿ ಮಾತನಾಡಿದ ಅವರು, ಏರ್‌ಲೈನ್ಸ್ ಸಿಬ್ಬಂದಿ ವಿಮಾನ ಲ್ಯಾಂಡ್ ಆಗುವ ಮೊದಲೇ ಜ್ವರ ಹಾಗೂ ಚರ್ಮದ ಗುಳ್ಳೆಗಳಿವವರನ್ನು ಪತ್ತೆ ಹಚ್ಚಬೇಕು. ಅಂತಹ ಪ್ರಯಾಣಿಕರನ್ನು ಪ್ರತ್ಯೇಕಿಸಿ ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಬೇಕು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಮೇಲ್ವಿಚಾರಣೆ ಮಾಡುವ ಸಿಬ್ಬಂದಿಯೂ ಜ್ವರ ಹಾಗೂ ಚರ್ಮದ ಗುಳ್ಳೆಯ ಬಗ್ಗೆ ಪ್ರಯಾಣಿಕರಿಂದ ಖಚಿತ ಪಡಿಸಿಕೊಳ್ಳಬೇಕು. ರೋಗ ಲಕ್ಷಣಗಳಿರುವ ಪ್ರಯಾಣಿಕರನ್ನು (ಸಂಶಯಾಸ್ಪದ) ಪ್ರತ್ಯೇಕಿಸಿ ತಕ್ಷಣ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ತೆರೆಯಲಾದ ಮಂಕಿ ಫಾಕ್ಸ್ ಐಸೋಲೇಶನ್ ವಾರ್ಡ್‍ಗೆ ದಾಖಲಿಸುವಂತೆ ಸೂಚಿಸಿದರು.
ಮಂಕಿ ಪಾಕ್ಸ್ ಹರಡದಂತೆ ಜಾಗೃತಿ ಮೂಡಿಸುವ ಕನ್ನಡ, ಮಲಯಾಳಂ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಐ.ಇ.ಸಿ ಸ್ಟ್ಯಾಂಡಿಗಳನ್ನು ಸಿದ್ದಪಡಿಸಲು ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿ, ಮಂಕಿ ಪಾಕ್ಸ್ ಜಾಗೃತಿ ಮೂಡಿಸುವ ವಿವಿಧ ಫೋಟೋಗಳನ್ನು ಅಳವಡಿಸಬೇಕು. ಸಿಬ್ಬಂದಿಯ ವಾಟ್ಸ್ಆ್ಯಪ್ ಗ್ರೂಪ್‍ನಲ್ಲೂ ಈ ಬಗ್ಗೆ ಶೇರ್ ಮಾಡಲು ವಿಮಾನ ನಿಲ್ದಾಣ ಆರೋಗ್ಯಾಧಿಕಾರಿ ಹಾಗೂ ಏರ್‌ಲೈನ್ಸ್ ಅಧಿಕಾರಿಯವರಿಗೆ ನಿರ್ದೇಶಿಸಿದರು. ಮಂಕಿ ಪಾಕ್ಸ್ ಬಗ್ಗೆ ಕ್ಯಾಬ್ ಚಾಲಕರಿಗೆ ಅರಿವು ಮೂಡಿಸಬೇಕು. ವಿಮಾನ ನಿಲ್ದಾಣದ ಡಿಜಿಟಲ್ ಡಿಸ್‍ಪ್ಲೇಯಲ್ಲಿ ಹಾಗೂ ಮೈಕ್ ಮೂಲಕ ಅರಿವು ಮೂಡಿಸಬೇಕು. ಜನರು ಭಯಭೀತರಾಗದೆ ಅರಿವು ಮೂಡಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಕೋರಿದರು.
Kshetra Samachara
19/07/2022 10:28 pm