ಉಡುಪಿ: ಪಾಸಿಟಿವಿಟಿ ರೇಟ್ ಹೆಚ್ಚಿದ ಕಾರಣಕ್ಕೆ ತರಗತಿಗಳು ಆರಂಭವಾಗಿರಲಿಲ್ಲ.ಈಗ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.ಇದೊಂದು ಆಶಾದಾಯಕ ಬೆಳವಣಿಗೆ.ಜಿಲ್ಲೆಯಲ್ಲಿಕಳೆದ ಮೂರು ದಿನಗಳಲ್ಲಿ ಪಾಸಿಟಿವಿಟಿ ರೇಟ್ ಶೇ. 1.4 ಇದೆ.ಈ ಹಿನ್ನೆಲೆಯಲ್ಲಿ ಶಾಲಾರಂಭ ಮಾಡುತ್ತೇವೆ.9ನೇ ತರಗತಿಯಿಂದ ದ್ವಿತೀಯ ಪಿಯು ವರೆಗೆ ಶಾಲಾರಂಭ ಮಾಡುವ ಬಗ್ಗೆ ಜಿಲ್ಲಾಡಳಿತ ನಿರ್ಣಯ ಕೈಗೊಂಡಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಚಿವರು ,ಸೆಪ್ಟಂಬರ್ 1ರಿಂದ ತರಗತಿಗಳು ಆರಂಭವಾಗಲಿವೆ.ಖಾಸಗಿ ಶಿಕ್ಷಣ ಸಂಸ್ಥೆಗಳು ಎಚ್ಚರಿಕೆಯಿಂದ ಗಮನಿಸಬೇಕು.ಆದರೆ ಶಿಕ್ಷಕರಿಗೆ ಲಸಿಕೆ ಕಡ್ಡಾಯ.ಕೋವಿಡ್ ನಿಯಮಾವಳಿ ಅರ್ಥೈಸಿಕೊಂಡು ತರಗತಿ ಆರಂಭಿಸಲಾಗುವುದು ಎಂದು ಹೇಳಿದರು.
Kshetra Samachara
30/08/2021 01:30 pm