ಮಣಿಪಾಲ: ಸಹಾಯ ಹಸ್ತಾ ಮಣಿಪಾಲ್ ಲಯನ್ಸ್ ಚಾರಿಟೇಬಲ್ ಫೌಂಡೇಶನ್, ದಿ ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ಜಿಲ್ಲೆ 317 ಸಿ ಮತ್ತು ಸಿಎಸ್ಆರ್ ಪ್ರಾಜೆಕ್ಟ್ ಆಫ್ ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗಕ್ಕೆ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು. ಹಸ್ತಾಂತರಿಸಿದ ಉಪಕರಣಗಳು ದಾದಿಯರು, ವೈದ್ಯರು ಮತ್ತು ರೋಗಿಗಳಿಗೆ ಸುರಕ್ಷತೆಯನ್ನು ಖಾತ್ರಿಪಡಿಸುವ ಕಟ್ಟುನಿಟ್ಟಾದ ಅಸೆಪ್ಟಿಕ್ ಮುನ್ನೆಚ್ಚರಿಕೆಗಳ ಅಡಿಯಲ್ಲಿ ಕೀಮೋಥೆರಪಿಯನ್ನು ತಯಾರಿಸಲು ಇದು ಅಗತ್ಯವಾಗಿರುತ್ತದೆ.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ಜಿಲ್ಲೆ 317 ಸಿ ಇದರ ಜಿಲ್ಲಾ ರಾಜ್ಯಪಾಲರಾದ PMJF ಲII ಎಚ್ ವಿಶ್ವನಾಥ್ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ಎಲ್ಲಾ ಚಿಕಿತ್ಸೆಗಳನ್ನು ಆಧುನಿಕ ಸೌಲಭ್ಯದೊಂದಿಗೆ ಅತೀ ಕಡಿಮೆ ದರದಲ್ಲಿ ನೀಡುವುತ್ತಿರುವುದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಇನ್ನಷ್ಟು ಅನುದಾನ ತರಲಾಗುವುದು ಮತ್ತು ಅನುದಾನ ನೀಡುವ ನಮ್ಮ ಮೊದಲ ಆಯ್ಕೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಆಗಿರುತ್ತದೆ” ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ 2 ನೇ ಉಪ ರಾಜ್ಯಪಾಲ MJF ಲII ಡಾ.ನೇರಿ ಕರ್ನೆಲಿಯೊ, ಸಹಾಯ ಹಸ್ತಾ ಮಣಿಪಾಲ್ ಲಯನ್ಸ್ ಚಾರಿಟೇಬಲ್ ಫೌಂಡೇಶನ್ ಮುಖ್ಯಸ್ಥರಾದ PMJF ಲII ಡಾ. ಎಚ್ ಗಣೇಶ್ ಪೈ, ಕೆ ಎಂ ಸಿ ಡೀನ್ ಡಾ. ಶರತ್ ಕೆ ರಾವ್, ಫೆಡರಲ್ ಬ್ಯಾಂಕ್ ನ ವ್ಯವಸ್ಥಾಪಕರಾದ ಕೆ. ಶೈನ್ , ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಲಯನ್ಸ್ ಕ್ಲಬ್ ಮಣಿಪಾಲ್ ಅಧ್ಯಕ್ಷ MJF ಲIIಸತೀಶ್ಚಂದ್ರ, ಎಂಸಿಸಿಸಿಸಿ ಇದರ ಸಂಯೋಜಕರಾದ ಡಾ. ನವೀನ್ ಎಸ್ ಸಲೀನ್ಸ್, ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಡಾ.ವಾಸುದೇವ ಭಟ್, ಮತ್ತು ಇತರ ಲಯನ್ಸ್ ಗಣ್ಯರು ಉಪಸ್ಥಿತರಿದ್ದರು.
Kshetra Samachara
29/07/2021 11:01 pm