ಮಂಗಳೂರು: ಮಂಗಳೂರಲ್ಲಿ ಮತ್ತೊಂದು ಆಂಬ್ಯುಲೆನ್ಸ್ ಗೆ ತಡೆ ಹಾಕಿದ ಕೇಸ್ ಬೆಳಕಿಗೆ ಬಂದಿದೆ. ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಮಂಗಳೂರಿನಿಂದ ಉಡುಪಿಗೆ ಸಾಗಿಸುವ ದಾರಿ ಮಧ್ಯೆ ಕಾರೊಂದು ಉದ್ದೇಶಪೂರ್ವಕವಾಗಿಯೇ ಅಡ್ಡ ಬಂದಿದೆ ಎಂದು ಆಂಬ್ಯುಲೆನ್ಸ್ ಚಾಲಕರು ಆರೋಪಿಸಿದ್ದಾರೆ.
ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ ಭಟ್ಕಳಕ್ಕೆ ರೋಗಿಯನ್ನು ಕರೆದೊಯ್ಯುತ್ತಿದ್ದ ವೇಳೆ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. 30 ಕಿಲೋ ಮೀಟರ್ ತನಕ ದಾರಿ ಬಿಡದೆ ಕಾರು ಚಾಲಕ ಸತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮೂಲ್ಕಿಯಿಂದ ಆಂಬ್ಯುಲೆನ್ಸ್ ಮುಂಭಾಗಕ್ಕೆ ಬಂದ ಕೆಎ19 ಎಂಡಿ 6843 ನೋಂದಣಿ ಸಂಖ್ಯೆಯ ಕಾರು ತದನಂತರ ಉಡುಪಿ ನಗರದವರೆಗೂ ದಾರಿ ಬಿಡದೆ ಅಡ್ಡಾದಿಡ್ಡಿಯಾಗಿ ಸಂಚರಿಸಿದೆ. ಕಾರಿನಲ್ಲಿದ್ದ ಇಬ್ಬರು ಯುವಕರು ಕೈ ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಬಗ್ಗೆ ಆರೋಪ ಕೇಳಿ ಬಂದಿದೆ.
PublicNext
20/01/2022 09:35 pm