ಮಂಗಳೂರು:ಕೋರೊನಾ ವೈರಸ್ ನಿಂದ ಇಡೀ ಜಗತ್ತೆ ತತ್ತರಿಸಿ ಹೋಗಿತ್ತು,ವಿಶ್ವಾದ್ಯಾಂತ ಲಕ್ಷಾಂತರ ಮಂದಿ ಈ ಮಾಹಾಮಾರಿಗೆ ಬಲಿಯಾಗಿದ್ದರು. ಅದ್ರೆ ಇದೀಗ ಬ್ರಿಟನ್ ರಾಷ್ಟ್ರದಲ್ಲಿ ಕೊರೋನ ಮಾದರಿಯ ಎರಡನೇ ಅಲೆಯ ಆರ್ಭಟ ಶುರುವಾಗಿದೆ.
ಜನರಲ್ಲಿ ಮತ್ತೆ ಅತಂಕ ಸೃಷ್ಟಿಯಾಗಿದೆ. ಈಗಾಗಲೇ ಎಲ್ಲ ರಾಷ್ಟ್ರಗಳು ಮುನ್ನೆಚ್ಚರಿಕೆ ವಹಿಸಿವೆ. ಇದೇ ವೇಳೆ ಬ್ರಿಟನ್‌ನಿಂದ ಮಂಗಳೂರಿಗೆ 56 ಮಂದಿ ಆಗಮಿಸಿದ್ದು, ದ.ಕ. ಜಿಲ್ಲೆಯಲ್ಲಿ ಕೊರೋನದ 2ನೇ ಅಲೆ ಭೀತಿ ಹುಟ್ಟಿಸಿದೆ.
ಬ್ರಿಟನ್ ಸಹಿತ ಹಲವು ದೇಶಗಳಿಂದ ಭಾರತೀಯರು ವಾಪಸಾಗುತ್ತಿದ್ದು, ಮಂಗಳೂರಿಗೂ 56 ಮಂದಿ ಬಂದಿದ್ದಾರೆ. ಇವರೆಲ್ಲರೂ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್‌ನೊಂದಿಗೆ ತಾಯ್ನಾಡು ಪ್ರವೇಶಿಸಿದ್ದಾರೆ. ಎಲ್ಲರನ್ನೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಾರಿ,ಹೇಳಿದ್ದಾರೆ...
Kshetra Samachara
22/12/2020 08:42 pm