ಉಡುಪಿ : ಕರೋನಾ ವ್ಯಾಕ್ಸಿನ್ ಸಂಗ್ರಹಿಸಿಡಲು ಎರಡು ಕೋಟಿ 28 ಲಕ್ಷ ಜನರಿಗೆ ಬೇಕಾದ ವ್ಯಾಕ್ಸಿನ್ ಸಂಗ್ರಹಿಸಿಡಲು ಸುಸಜ್ಜಿತ ಕೊಠಡಿ ಸಿದ್ಧಪಡಿಸಲಾಗಿದೆ. ಈ ಕೋಣೆಯಲ್ಲಿ 2 ಕೋಟಿ 28 ಲಕ್ಷ ಡೋಸೇಜ್ ನ 27000 ಲೀಟರ್ ಕೋವಿಡ್ ವ್ಯಾಕ್ಸಿನ್ ಸಂಗ್ರಹಿಸಿಡುವ ಸಾಮರ್ಥ್ಯವಿದೆ. 20ಲಕ್ಷ ವೆಚ್ಚದಲ್ಲಿ ಲ್ಯಾಬ್ ಸಿದ್ಧಪಡಿಸಲಾಗಿದೆ. ಕೇಂದ್ರ ಸರ್ಕಾರ ಈ ವೆಚ್ಚವನ್ನು ಹೂಡಿಕೆ ಮಾಡಿದ್ದು ನ್ಯಾಕೋ ಕಂಪನಿ ಸಹಕಾರದೊಂದಿಗೆ ಲ್ಯಾಬ್ ನಿರ್ಮಾಣ ಮಾಡಲಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಕ್ಸಿನ್ ಸಂಗ್ರಹಕ್ಕೆ ಈ ವಾಕ್ ಇನ್ ಕೂಲರ್ ಕೊಠಡಿ ಬಳಸಲಾಗುವುದು ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದರು.
4* ಸೆಲ್ಸಿಯಸ್ ನಲ್ಲಿ ವ್ಯಾಕ್ಸಿನನ್ನು ಕಾಪಾಡಲಾಗುತ್ತದೆ. ತಿಂಗಳಿಗೆ ಸುಮಾರು 30 ಸಾವಿರ ವಿದ್ಯುತ್ ಬಿಲ್ ಹೆಚ್ಚುವರಿ ಬರಲಿದೆ.
Kshetra Samachara
24/11/2020 05:47 pm