ಮಂಗಳೂರು: ನಗರದ ಲೇಡಿ ಗೊಷನ್ ಆಸ್ಪತ್ರೆಯಲ್ಲಿ ಅಕ್ಟೋಬರ್ ಒಂದೇ ತಿಂಗಳಲ್ಲಿ ದಾಖಲೆಯ ಹೆರಿಗೆಗಳಾಗಿವೆ. ಒಂದೇ ತಿಂಗಳಲ್ಲಿ ಬರೋಬ್ಬರಿ 800ಕ್ಕೂ ಹೆಚ್ಚು ಶಿಶುಗಳು ಆರೋಗ್ಯ ಪೂರ್ಣ ಜನನವಾಗಿವೆ. ಇವುಗಳ ಪೈಕಿ 379 ರಲ್ಲಿ ಸಿಸೇರಿಯನ್ ಆಗಿದ್ದರೆ ಉಳಿದವು ಸಾಮಾನ್ಯ ಹೆರಿಗೆಗಳಾಗಿವೆ.
ಸಾಮಾನ್ಯವಾಗಿ ಈ ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳು ಸುಮಾರು 450 ರಿಂದ 500 ಹೆರಿಗೆಗಳ ನಿರ್ವಹಣೆ ಸಾಧ್ಯವಿದೆ. ಆದಾಗ್ಯೂ, ಲೇಡಿಗೋಷನ್ ನಲ್ಲಿ ಅಕ್ಟೋಬರ್ ತಿಂಗಳಲ್ಲಿ 800 ಹೆರಿಗೆಗಳು ಮತ್ತು ಸೆಪ್ಟೆಂಬರ್ 650 ಹೆರಿಗೆಗಳನ್ನು ದಾಖಲಾಗಿವೆ.
ಕೋವಿಡ್ -19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ, ಧನಾತ್ಮಕ ಪರೀಕ್ಷೆ ನಡೆಸಿದ ಎಲ್ಲಾ ಗರ್ಭಿಣಿಯರನ್ನು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಇದನ್ನು ಹೊರತುಪಡಿಸಿ ಒಂದೇ ತಿಂಗಳಲ್ಲಿ ಲೇಡಿ ಗೋಷನ್ ಆಸ್ಪತ್ರೆಯಲ್ಲಿಯೇ 23 ಹಾಸಿಗೆಗಳ ಪ್ರತ್ಯೇಕ ಕೋವಿಡ್ ಬ್ಲಾಕ್ ಆರಂಭಿಸಲಾಗಿತ್ತು. ಇದರಿಂದಾಗಿ ಗರ್ಭಿಣಿಯರ ಆತಂಕ ದೂರವಾಗಿದೆ.
ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಲೋಡಿಗೋಷನ್ ಆಸ್ಪತ್ರೆಯಲ್ಲಿ ಒಂದೇ ತಿಂಗಳಲ್ಲಿ ಅತ್ಯಧಿಕ ಸಂಖ್ಯೆಯ ಹೆರಿಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಅಲ್ಲದೆ, ಕೋವಿಡ್ ನಿರ್ವಹಣೆಗೆ ಕೈಗೊಳ್ಳಲಾದ ಕ್ರಮಗಳು, ಆಸ್ಪತ್ರೆಯಲ್ಲಿನ ಮೂಲ ಸೌಕರ್ಯಗಳು ಹಾಗೂ ಪ್ರಸ್ತುವ ವಸ್ತು ಸ್ಥಿತಿ ಯಾವ ರೀತಿ ಇದೇ ಎಂಬುವುದಕ್ಕೆ ಕೈಗನ್ನಡಿಯಂತಾಗಿದೆ. ದಕ್ಷಿಣ ಕನ್ನಡದಿಂದ ಮಾತ್ರವಲ್ಲದೆ ಉಡುಪಿ, ಕೊಡಗು, ಚಿಕ್ಕಮಗಳೂರು ಮತ್ತು ಕೇರಳದ ಕಣ್ಣೂರು ಜಿಲ್ಲೆಗಳಿಂದಲೂ ಹೆರಿಗೆಗೆ ಲೇಡಿ ಗೋಷನ್ ಆಸ್ಪತ್ರೆಯನ್ನು ಹಲವರು ಅವಲಂಬಿಸಿದ್ದಾರೆ. ಅಕ್ಟೋಬರ್ ತಿಂಗಳ ದಾಖಲೆಯ
ಹೆರಿಗೆ ಆಸ್ಪತ್ರೆ ಸಿಬ್ಬಂದಿಗಳ ಆತ್ಮ ವಿಶ್ವಾಸ ಹೆಚ್ಚಿಸಿದೆ.
Kshetra Samachara
02/11/2020 04:21 pm