ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೀಕ್ ಎಂಡ್ ಕರ್ಫ್ಯೂ: ಮಂಗಳೂರು ವಿವಿ ಆ.14, 28 ಪರೀಕ್ಷೆ ಮುಂದೂಡಿಕೆ

ಮಂಗಳೂರು: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳೂರು ವಿವಿಯ ಎರಡು ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಆಗುವುದರಿಂದ ಆ.14 ಹಾಗೂ ಆ.28 ರ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ.

ಮುಂದೂಡಲಾಗಿರುವ ಎರಡು ಪರೀಕ್ಷೆಗಳ ದಿನಾಂಕ ಬದಲಾವಣೆ ಮಾಡಿ ಮರು ನಿಗದಿಪಡಿಸಿದ್ದು, ಕೋರ್ಸ್ ವಾರು, ವಿಷಯವಾರು ಪರಿಷ್ಕೃತ ವೇಳಾಪಟ್ಟಿಯನ್ನು ಮಂಗಳೂರು ವಿವಿಯ ಅಧಿಕೃತ ಜಾಲತಾಣ ಹಾಗೂ ಕಾಲೇಜಿನಲ್ಲಿ ಆ.12ರಿಂದ ಪಡೆದುಕೊಳ್ಳಬಹುದು.

ಉಳಿದಂತೆ ಯಾವುದೇ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗುತ್ತಿಲ್ಲ ಎಂದು ಮಂಗಳೂರು ವಿವಿ ಪರಿಕ್ಷಾ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

11/08/2021 09:46 pm

Cinque Terre

24.42 K

Cinque Terre

1

ಸಂಬಂಧಿತ ಸುದ್ದಿ