ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಕ್ಫ್ ಕಾಯ್ದೆ ಸಂವಿಧಾನ ವಿರೋಧಿ- ಸಂಸದ ಬ್ರಿಜೇಶ್ ಚೌಟ ಕಿಡಿ

ಮಂಗಳೂರು: ದ.ಕ. ಜಿಲ್ಲೆಯ ಮಂಗಳೂರಿನಲ್ಲೂ ಕಳೆದ 24 ವರ್ಷಗಳಲ್ಲಿ 37 ಆಸ್ತಿಗಳು ವಕ್ಫ್ ಪಾಲಾಗಿದೆ. ಆ ಪೈಕಿ ಶೇ.50ರಷ್ಟು ಆಸ್ತಿಗಳು ಸರ್ಕಾರಿ ಭೂಮಿ ಮತ್ತು ವಕ್ಫ್ ಬೈ ಯೂಸರ್ ಎಂಬ ಆಧಾರದಲ್ಲಿ ಹಸ್ತಾಂತರವಾಗಿದೆ. ಇದು ಕೇವಲ ಸ್ಯಾಂಪಲ್ ಮಾತ್ರ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಸರ್ಕಾರಿ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಬದಲಿಸುವುದು ಹಾಗೂ ಅದನ್ನು ವಕ್ಫ್‌ಗೆ ನೀಡಿದ ಮೇಲೆ 1995ರ ತಿದ್ದುಪಡಿ ಕಾಯ್ದೆ ಪ್ರಕಾರ ಪ್ರಶ್ನಿಸುವ ಅಧಿಕಾರವಿರುವುದು ಟ್ರ್ಯಬುನಲ್‌ಗೆ ಮಾತ್ರ. ವಕ್ಫ್ ಟ್ರ್ಯಬುನಲ್ ಆದೇಶ ಪ್ರಶ್ನಿಸುವ ಅಧಿಕಾರ ಹೈಕೋರ್ಟ್-ಸುಪ್ರೀಂಕೋರ್ಟ್‌ಗೂ ಇಲ್ಲ. ಆದ್ದರಿಂದ ವಕ್ಫ್ ಕಾಯ್ದೆಯು ನಮ್ಮ ಸಂವಿಧಾನ ವಿರೋಧಿ ಕಾಯ್ದೆಯಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ವಕ್ಫ್ ಆಸ್ತಿಯಲ್ಲಿ ದೊಡ್ಡಮಟ್ಟದ ಗೋಲ್ ಮಾಲ್ ಆಗಿರುವ ಬಗ್ಗೆ ಅನ್ವರ್ ಮಾಣಿಪ್ಪಾಡಿ ಈಗಾಗಲೇ ನೀಡಿರುವ ವರದಿಯ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಅಕ್ರಮದಲ್ಲಿ ಭಾಗಿಯಾಗುವುದರ ಮೂಲಕ ಮುಸ್ಲಿಂ ಸಮುದಾಯಕ್ಕೆ ದ್ರೋಹ ಬಗೆದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವಾಗ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತರಾತುರಿಯಲ್ಲಿ ವಕ್ಫ್ ಆಸ್ತಿ ಹೆಸರಿನಲ್ಲಿ ರೈತರ ಭೂಮಿಯನ್ನು ಕಬಳಿಸಲು ಹೊರಟಿರುವುದು ಸಾಕಷ್ಟು ಅನುಮಾನಕ್ಕೆಡೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ವಕ್ಫ್ ಆಸ್ತಿಯಲ್ಲಿ ಹಗರಣ ಮಾಡಲು ಹೊರಟಿರುವ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಬಗ್ಗೆ ನಿಜವಾದ ಕಾಳಜಿಯಿದ್ದರೆ ಕೇಂದ್ರ ಸರ್ಕಾರ ತರಲು ಹೊರಟಿರುವ ವಕ್ಫ್ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯಲ್ಲಿ ಪಾಲ್ಗೊಂಡು ತಿದ್ದುಪಡಿ ಪ್ರಕ್ರಿಯೆಗಳಿಗೆ ಬೆಂಬಲ ನೀಡಲಿ ಬ್ರಿಜೇಶ್ ಚೌಟ ಹೇಳಿದರು.

Edited By : Ashok M
PublicNext

PublicNext

03/11/2024 08:40 pm

Cinque Terre

45.65 K

Cinque Terre

1

ಸಂಬಂಧಿತ ಸುದ್ದಿ