ಕುಂದಾಪುರ: ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನದಿ ನೀರು ಮತ್ತು ಮಳೆಯ ನೀರು ಒಟ್ಟಾಗಿ ಹೊರ ಬಂದು ನೀರು ನಿಂತ ಜಾಗದಲ್ಲಿ ದೊಡ್ಡ ದೊಡ್ಡ ಮೀನುಗಳು ಕಾಣಿಸಿಕೊಂಡು ಮತ್ಸ್ಯಪ್ರಿಯರಲ್ಲಿ ರೋಮಾಂಚನಕ್ಕೆ ಕಾರಣವಾಯಿತು.
ಉಡುಪಿ ಜಿಲ್ಲೆಯ ಕುಂದಾಪುರದ ಮಲ್ಯಾಡಿಯ ಯುವಕರ ತಂಡ ನೆರೆನೀರಲ್ಲಿ ಭರ್ಜರಿ ಮೀನಿನ ಬೇಟೆಯಾಡಿದೆ. ಐವತ್ತಕ್ಕೂ ಹೆಚ್ಚಿನ ಯುವಕರ ತಂಡ ಗದ್ದೆಯಲ್ಲಿ ಮೀನು ಹಿಡಿಯುವ ಬಲೆಯ ಸಹಾಯದಿಂದ ಮೀನು ಹಿಡಿದಿದ್ದಾರೆ. ವಿವಿಧ ಬಗೆಯ ನದಿ ಮೀನುಗಳು ಬಲೆಗೆ ಬಿದ್ದಿದ್ದು, ಮತ್ಸ್ಯ ಪ್ರಿಯರು ಸಂತಸಗೊಂಡಿದ್ದಾರೆ.
Kshetra Samachara
01/07/2022 02:29 pm