ಸುರತ್ಕಲ್:ತಾಂತ್ರಿಕ ವಿದ್ಯುನ್ಮಾನಗಳೊಂದಿಗೆ ಬದುಕು ಅನಿವಾರ್ಯವಾಗಿದ್ದು ಆದರೆ ಅದೇ ಬದುಕಾಗುತ್ತಿರುವುದು ಶೋಚನೀಯ ಎಂದು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ ಹೇಳಿದರು. ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಜರಗಿದ ಕಾಲೇಜಿನ ಶಿಕ್ಷಕ -ರಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದರು.
ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್‌ನ ಉಪಾಧ್ಯಕ್ಷ ವ್ಯೆ ವಿ ರತ್ನಾಕರ ರಾವ್ ಅಧ್ಯಕ್ಷತೆ ವಹಿಸಿದ್ದು 22-23ರ ಸಾಲಿನ ಪದಾಧಿಕಾರಿಗಳನ್ನು ಚುನಾವಣೆಯ ಮೂಲಕ ಆರಿಸಲಾಯಿತು.
ಅಧ್ಯಕ್ಷರಾಗಿ ಗಂಗಾಧರ ಕೆ ಉಪಾಧ್ಯಕ್ಷರಾಗಿ ಪ್ರಿಯಾ ಆಯ್ಕೆಯಾದರು.ಚುನಾವಣೆಯ ಪ್ರಕ್ರಿಯೆಯನ್ನು ವಾಣಿಜ್ಯ ವಿಭಾಗದಉಪನ್ಯಾಸಕಿ ಕೃತಿ ನೆರವೇರಿಸಿದರು. 2022 ನೇ ಸಾಲಿನನಲ್ಲಿ ವಿಶಿಷ್ಟ ಶ್ರೇಣಿಯಲ್ಲಿತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹಿಂದೂ ವಿದ್ಯಾದಾಯಿನೀ ಸಂಘದ ಜೊತೆ ಕಾರ್ಯದರ್ಶಿ ರಮೇಶ್. ಟಿ.ಎನ್ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲೆ .ಸುನೀತಾ.ಕೆ ಸ್ವಾಗತಿಸಿದರು.ಆಂಗ್ಲಭಾಷಾಉಪನ್ಯಾಸಕಿ ಪ್ರಜ್ವಲಾ ವಂದಿಸಿದರು.ಗಣಿತ ಶಾಸ್ತ್ರ ವಿಭಾಗದ ಉಪನ್ಯಾಸಕಿ ರಶ್ಮಿ ಕೆ ಕಾರ್ಯಕ್ರಮ ನಿರೂಪಿಸಿದರು.
Kshetra Samachara
12/07/2022 07:37 pm