ಮುಲ್ಕಿ:ಪಡುಬಿದ್ರಿ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಬೀಚ್ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತೆಯ ದಿನದ ಅಂಗವಾಗಿ ನಡೆದ ಬೀಚ್ ಕ್ಲೀನಿಂಗ್ ಸ್ಪರ್ಧೆಯಲ್ಲಿ ವಿಜಯ ಕಾಲೇಜು ಮುಲ್ಕಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕ ವಿದ್ಯಾರ್ಥಿಗಳಾದ ಕು. ಚಂದನ, ಕು. ಸಹನಾ, ಕು. ನಯನಾ, ಕು. ಭಾಗ್ಯಲಕ್ಷ್ಮೀ ಹಾಗೂ ಕು. ವೀಕ್ಷಿತಾ ದ್ವಿತೀಯ ಬಹುಮಾನ ಪಡೆದರು.
ಉಡುಪಿ ಸಾಯಿರಾಧಾ ಗ್ರೂಪ್ಸ್ ನ ಆಡಳಿತ ನಿರ್ದೇಶಕರಾದ ಮನೋಹರ ಶೆಟ್ಟಿ ಬಹುಮಾನ ವಿತರಿಸಿದರು. ಅರಣ್ಯ ಇಲಾಖೆಯ ಅಧಿಕಾರಿ ಲೋಬೋ , ಹಾಗೂ ಅತಿಥಿಗಳಾಗಿ ಅಶೋಕ್ ಸಾಲಿಯಾನ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.
Kshetra Samachara
18/09/2021 10:24 pm