ಕೋಟ: ಕೋಟದ ಪಡುಕರೆ ಸಂಯುಕ್ತ ಪ್ರೌಢಶಾಲೆಯ ಸಭಾಂಗಣದಲ್ಲಿ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇದರ ವತಿಯಿಂದ ಆನಂದೋತ್ಸವ ನಡೆಯಿತು. ಈ ಸಂದರ್ಭ ಸುಮಾರು 18 ಸರಕಾರಿ ಶಾಲೆಗಳ 3 ಸಾವಿರ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ವಿಶೇಷ ಚೇತನರಿಗೆ ಗಾಲಿ ಸೈಕಲ್, ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ, ಸಾಲಿಗ್ರಾಮದ ಪಿ.ವಿ ಆನಚಿದ್ ಇವರನ್ನು ಸನ್ಮಾನಿಸಲಾಯಿತು. 2019-20 ಮತ್ತು 20-21ರಲ್ಲಿ ಎಸ್‍ಎಸ್‍ಎಲ್‌ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸುಮಾರು 37 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ನೀಡಲಾಯಿತು. ವಿಶೇಷಚೇತನರಿಗೆ ಗಾಲಿ ಸೈಕಲ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇದರ ಪ್ರವರ್ತಕ ಆನಂದ್ ಸಿ ಕುಂದರ್, ಬಡವರ ಕಣ್ಣೊರೆಸುವ ಕೆಲಸವನ್ನು ಗೀತಾನಂದ ಫೌಂಡೇಶನ್ ಯಾವುದೇ ಅಪೇಕ್ಷೆ ಇಲ್ಲದೆ ಮಾಡುತ್ತಿದೆ. ನಾವು ಸಂಪಾದಿಸಿದ ಸ್ವಲ್ಪ ಭಾಗವನ್ನು ಕಷ್ಟಕ್ಕೆ ಸ್ಪಂದಿಸುವ ಈ ಸಮಾಜಕ್ಕೆ ನೀಡುತ್ತಿದ್ದೇವೆ. ಈ ಭಾಗದ ಬಹುದಿನಗಳ ಕನಸಾದ ಪಿಯು ಕಾಲೇಜು ಅನುಷ್ಠಾನ ಆಗಬೇಕು ಹಾಗೂ ಇಲ್ಲಿಯ ಶಾಲೆಗಳಲ್ಲಿ ಶಿಕ್ಷಕರ ಕೊರೆತೆ ನೀಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯನ್ನು ಒತ್ತಾಯಿಸಿದರು.
Kshetra Samachara
15/09/2021 04:58 pm